ಉಪ್ಪಳ: ಎಲ್.ಡಿ.ಎಫ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ವಿ. ರಮೇಶ್ ಅವರನ್ನು ವಿಜಯಗೊಳಿಸಲು ಮಂಡಲದ ವಿವಿಧೆಡೆ ಚುನಾವಣಾ ಸಮಿತಿ ರೂಪೀಕರಿಸಲಾಯಿತು.
ಬಂದ್ಯೋಡ್ ಲೋಕಲ್ ಚುನಾವಣಾ ಸಮಾವೇಶವನ್ನು ರಘುದೇವ್ ಮಾಸ್ತರ್ ಉದ್ಘಾಟಿಸಿದರು. ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಝುಬೈರ್ ಸಿ.ಎ, ಬೇಬಿ ಶೆಟ್ಟಿ, ಮೊಯ್ದಿನ್ ಮಾತನಾಡಿದರು. ಮಂಜೇಶ್ವರ ಲೋಕಲ್ ಚುನಾವಣಾ ಸಮಾವೇಶವನ್ನು ಬಿ.ವಿ ರಾಜನ್ ಉದ್ಘಾಟಿಸಿದರು.ಬಿ.ಎಂ ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಕಮಲಾಕ್ಷ.ಕೆ ಸ್ವಾಗತಿಸಿದರು. ವಿ.ಪಿ.ಪಿ ಮುಸ್ತಫಾ ಮಾತನಾಡಿದರು. ಬಾಂಬ್ರಣ ಲೋಕಲ್ ಚುನಾವಣಾ ಸಮಾವೇಶವನ್ನು ಪಿ.ರಘುದೇವ್ ಮಾಸ್ತರ್ ಉದ್ಘಾಟಿಸಿದರು. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ.ಶುಕೂರ್,ಕೆ.ಕೆ, ಅಬ್ದುಲ್ಲಾ,ಕೆ.ಸಿ, ಯೂಸುಫ್, ವಿಠಲ ರೈ ಮಾತನಾಡಿದರು. ಉಪ್ಪಳ ಲೋಕಲ್ ಸಮಾವೇಶವನ್ನು ರಘುದೇವ್ ಮಾಸ್ತರ್ ಉದ್ಘಾಟಿಸಿದರು. ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಲೋಕಲ್ ಸಮಾವೇಶವನ್ನು ಕೆ.ಆರ್ ಜಯಾನಂದ ಉದ್ಘಾಟಿಸಿದರು. ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಜಯರಾಮ ಬಲ್ಲಂಗುಡೇಲು, ಸುಧಾಕರ ಮಾಸ್ತರ್ ಮಾತನಾಡಿದರು.
ಕಾಟುಕುಕ್ಕೆ ಲೋಕಲ್ ಸಮಾವೇಶವನ್ನು ಕೆ.ಆರ್ ಜಯಾನಂದ ಉದ್ಘಾಟಿಸಿದರು. ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ ಮಂಜುನಾಥ್, ಸುಧಾಕರ ಮಾಸ್ತರ್ ಮಾತನಾಡಿದರು.
ಶೇಣಿ ಲೋಕಲ್ ಸಮಾವೇಶವದಲ್ಲಿ ರಮ್ಯಾ.ಎ ಅಧ್ಯಕ್ಷತೆ ವಹಿಸಿದ್ದರು. ನಾಸಿರುದ್ದೀನ್, ಸುಧಾಕರ ಮಾಸ್ತರ್ ಮಾತನಾಡಿದರು. ಮೀಂಜ ಲೋಕಲ್ ಸಮಾವೇಶವನ್ನು ಶಂಕರ್ ರೈ ಮಾಸ್ತರ್ ಉದ್ಘಾಟಿಸಿದರು. ಬಾಳಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು.ಅರವಿಂದ. ಸಿ, ರಾಮಕೃಷ್ಣ ಕಡಂಬಾರು ಮಾತನಾಡಿದರು.
ವರ್ಕಾಡಿ ಲೋಕಲ್ ಸಮಾವೇಶವನ್ನು ಶಂಕರ್ ರೈ ಮಾಸ್ತರ್ ಉದ್ಘಾಟಿಸಿದರು. ಸಿದ್ದೀಕ್ ಪಾಡಿ ಅಧ್ಯಕ್ಷತೆ ವಹಿಸಿದ್ದರು. ನವೀನ್ ಟಿ, ರಾಮಕೃಷ್ಣ ಕಡಂಬಾರು, ಡಿ.ಬೂವ ,ಭಾರತಿ ಸುಳ್ಯಮೆ ಮಾತನಾಡಿದರು.
ಕೊಡ್ಲಮೊಗರು ಲೋಕಲ್ ಸಮಾವೇಶವನ್ನು ಶಂಕರ್ ರೈ ಮಾಸ್ತರ್ ಉದ್ಘಾಟಿಸಿದರು. ಡಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಡಿ.ಬೂಬ, ಭಾರತಿ ಸುಳ್ಯಮೆ ಮಾತನಾಡಿದರು. ಕುಂಜತ್ತೂರು ಲೋಕಲ್ ಸಮಾವೇಶವನ್ನು ವಿ.ಪಿ.ಪಿ ಮುಸ್ತಫಾ ಉದ್ಘಾಟಿಸಿದರು. ಶ್ರೀಧರ ಮರಾರ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಕುಂಜತ್ತೂರು, ರಾಮಕೃಷ್ಣ ಕಡಂಬಾರು ಮಾತನಾಡಿದರು. ಬಡಾಜೆ ಲೋಕಲ್ ಸಮಾವೇಶವನ್ನು ವಿ.ಪಿ.ಪಿ ಮುಸ್ತಫಾ ಉದ್ಘಾಟಿಸಿದರು. ಮುಸ್ತಫಾ ಕಡಂಬಾರು ಅಧ್ಯಕ್ಷತೆ ವಹಿಸಿದ್ದರು. ದಯಾಕರ ಮಾಡ , ಬಿ.ವಿ ರಾಜನ್,ಸಿ.ಎ ಝುಬೈರ್, ಎಸ್.ರಾಮಚಂದ್ರನ್ ಮಾತನಾಡಿದರು.