ಕಾಸರಗೋಡು: 'ವನ್ ಇಂಡಿಯಾ-ವನ್ ಪೆನ್ಶನ್'ಚಳವಳಿಯ ಜನ ಮುನ್ನಡೆ ಯಾತ್ರೆ ಕಾಸರಗೋಡಿನಿಂದ ಸೋಮವಾರ ಆರಂಭಗೊಂಡಿತು. ವನ್ ಇಂಡಿಯಾ-ವನ್ ಪೆನ್ಶನ್ ಮೂಮೆಂಟ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕೀನೇರಿ ಉದ್ಘಾಟಿಸಿದರು.
60ವರ್ಷ ದಾಟಿದ ಎಲ್ಲಾ ಪ್ರಜೆಗಳಿಗೆ ಪ್ರತಿ ತಿಂಗಳು ಕನಿಷ್ಠ 10ಸಾವಿರ ರೂ. ಪಿಂಚಣಿಯಾಗಿ ನೀಡುವಂತೆ ಒತ್ತಾಯಿಸಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಜಿಲ್ಲೆಗಳ ಮೂಲಕ ಯಾತ್ರೆ ಸಂಚರಿಸಿ. ಕೋಯಿಕ್ಕೋಡ್ ಮುದಲಕ್ಕುಳಂ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.
ರಾಜ್ಯ ಸಮಿತಿ ಉಪಾಧ್ಯಕ್ಷ ಬೆನ್ನಿ ಅಬ್ರಹಾಂ, ಬಾಲಚಂದ್ರನ್ ಎರುವಾಟ್, ಗೋಪಿನಾಥನ್, ಸಜೀವನ್ ಚೆಲ್ಲೂರ್, ಸಹದೇವನ್, ಎಲ್ದೋ, ಮುಸ್ತಫಾ ಮೊಗ್ರಾಲ್‍ಪುತ್ತೂರ್, ಟಿ.ಪಿ ಸುಕುಮಾರನ್ ಉಪಸ್ಥಿತರಿದ್ದರು.