ಕಾಸರಗೋಡು: ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿ ಬಿಜೆಪಿಗೆ ಸೇರಿದ್ದಾರೆ. ಕೆ ಸುಂದರ ಬಿಜೆಪಿಗೆ ಸೇರಿದರು. ಅವರು ಬಿಎಸ್ಪಿಯಿಂದ ಸಲ್ಲಿಸಿದ ನಾಮಪತ್ರವನ್ನು ಇಂದು ಹಿಂಪಡೆಯಲಾಗುವುದು ಎಂದು ಸುಂದರ ಹೇಳಿರುವರು.
2016 ರಲ್ಲಿ ಕೆ ಸುಂದರ ಅವರು ಮಂಜೇಶ್ವರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 467 ಮತಗಳನ್ನು ಪಡೆದಿದ್ದರು. ಆ ಚುನಾವಣೆಯಲ್ಲಿ ಕೆ ಸುರೇಂದ್ರನ್ 89 ಮತಗಳಿಂದ ಪರಾಭವಗೊಂಡಿದ್ದರು.
ಸುಂದರ ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಎಸ್ಪಿ ಜಿಲ್ಲಾ ಸಮಿತಿ ಬದಿಡ್ಕ ಪೋಲೀಸರಿಗೆ ದೂರು ನೀಡಿತ್ತು. ಸುಂದರ ಶನಿವಾರದಿಂದ ಪೋನ್ ಸಂಪರ್ಕಕ್ಕೂ ಲಭ್ಯವಿರಲಿಲ್ಲ ಎಂದು ಬಿಎಸ್ಪಿ ದೂರಲ್ಲಿ ತಿಳಿಸಿತ್ತು. ಆದರೆ ಆ ಬಳಿಕ ನಡೆದ ನಾಟಕೀಯ ವಿದ್ಯಮಾನದಲ್ಲಿ ಸುಂದರ ಅವರು ಬಿಜೆಪಿಗೆ ಸೇರುವ ಇಂಗಿತವನ್ನು ಘೋಷಿಸಿದರು.