HEALTH TIPS

ಬದಿಯಡ್ಕದ ಪರಂ ಕಂಪ್ಯೂಟರ್ ಶಿಕ್ಷಣ ಕೇಂದ್ರದಲ್ಲಿ ಹನಿಕವಿ ಹ.ಸು.ಒಡ್ಡಂಬೆಟ್ಟುವರೊಡನೆ ಸಂವಾದ ಹಾಗೂ ಲಾಂಛನ ಬಿಡುಗಡೆ

    

        ಬದಿಯಡ್ಕ: ಪರಂ ಕಂಪ್ಯೂಟರ್ ಇನ್ಸೂಟ್ಯಟ್ ನ 28ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ "ಪರಮೋತ್ಸವ-2021

ಲಾಂಛನ ಬಿಡುಗಡೆ ಹಾಗೂ ಸಾಹಿತ್ಯ ಸಂವಾದ ಸರಣಿ ಕಾರ್ಯಕ್ರಮ ಭಾನುವಾರ ಬದಿಯಡ್ಕದಲ್ಲಿ ಜರಗಿತು.

       ಬದಿಯಡ್ಕದ ಖ್ಯಾತ ವೈದ್ಯ,ಸಾಹಿತಿ ಡಾ.ಶ್ರೀನಿಧಿ ಸರಳಾಯ ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿದರು. ಬಳಿಕ ನಡೆದ ಸಂವಾದ ಸರಣಿ ಕಾರ್ಯಕ್ರಮದಲ್ಲಿ ಹನಿಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು (ಹ.ಸು.) ಅವರ ಸಾಧನೆಗಳ ಅವಲೋಕನ ಹಾಗೂ ಸಂದರ್ಶನ ನಡೆಯಿತು. ಸಂಸ್ಥೆಯ  ಪ್ರಾಂಶುಪಾಲರು, ಚುಟುಕು ಕವಿ ವಿರಾಜ್ ಅಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ, ಬರಹಗಾರ ದಯಾನಂದ ರೈ ಕಳ್ವಾಜೆ ಅವರು ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಬದುಕು ಬರಹದ ಬಗ್ಗೆ ವಿಷಯ ಮಂಡಿಸಿದರು. 


        ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಅಕ್ಷರ ಕಟ್ಟುವ ಕವಿಯಾಗಿ, ಯಕ್ಷಗಾನ,ರಂಗ ಕಲಾವಿದ,ಸಂಘಟಕರಾಗಿ ಹ.ಸು ಒಡ್ಡಂಬೆಟ್ಟು ಅವರ ಬದುಕು ಆದರ್ಶತೆಗೆ ಪ್ರತೀಕವಾಗಿದೆ ಎಂದರು. ಹ.ಸು.ವಿನ ಅಕ್ಷರ ಬಿಂದುಗಳೆಲ್ಲ ಪಶುಕೆಚ್ಚಲಿನ ಕ್ಷೀರದಂತೆ ನಿರ್ಮಲವಾಗಿದ್ದು ಕಾವ್ಯಸಕ್ತರಿಗೆ ಪ್ರೇರಕವಾಗುಳಿಯುತ್ತದೆ. ಅದು ಇತರರನ್ನು ಅನುಕರಿಸುವಂತೆ ಕಾಣುವುದಿಲ್ಲ ಓದುತ್ತಾ ಮುಂದುವರಿದಂತೆ ಮನಸ್ಸಿಗೆ ಆಪ್ಯಾಯತೆ ನೀಡುತ್ತಾ ನಿಜ ಜೀವನದ ಸತ್ಯದರ್ಶನವನ್ನು ತೆರೆದಿಡುತ್ತಾ ಮುಂದುವರಿಯುತ್ತದೆ. ಮೇಲ್ನೋಟಕ್ಕೆ ನಾಲ್ಕಕ್ಷರಗಳ ಒಗಟಿನಂತೆ ಭಾಸವಾಗುವ ಇವರ ಬರಹಗಳು ಆಳಕ್ಕಿಳಿದಂತೆ ಹೊಸತನ್ನು ಉಣಬಡಿಸುವ ಚುಟುಕುಗಳಾಗಿಯೂ,ನ್ಯಾನೋ ರೂಪಕಗಳಾಗಿಯೂ,ಹನಿ ಒಸರುವ ರುಚಿಕರ ಬಿಂದುಗಳಾಗಿಯೂ ಗಮನ ಸೆಳೆಯುತ್ತದೆ ಎಂದು ದಯಾನಂದ ರೈ ಕಳ್ವಾಜೆ ಅಭಿಪ್ರಾಯಪಟ್ಟರು. 

      ಬಳಿಕ ನಡೆದ ನೇರ ಸಂವಾದ ಕಾರ್ಯಕ್ರಮದಲ್ಲಿ ಭಜನಾ ಸಂಕೀರ್ತನಕಾರೆ ಗೀತಾ ಎಂ.ಭಟ್, ಕವಯತ್ರಿ ಪದ್ಮಾವತಿ ವೈ.ನಾ. ಪೆರಡಾಲ,ಚಿನ್ಮಯ ಕೃಷ್ಣ ಮೊದಲಾದವರು ಹ.ಸು.ಅವರೊಡನೆ ಮಾತನಾಡಿದರು.ಈ ಸಂದರ್ಭದಲ್ಲಿ ಹ.ಸು.ಒಡ್ಡಂಬೆಟ್ಟು ಅವರು ತಮ್ಮ  ಪ್ರಕಟಿತ ಕೃತಿಗಳಾದ ಬೆಳಕು,ಸುರಗಿ,ದನಿಯಾದ ಹನಿಗಳು ಹಾಗೂ ಉದಿಪು(ತುಳು ಕೃತಿ)ಯನ್ನು ಪರಂ ಶಿಕ್ಷಣ ಸಂಸ್ಥೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. 

              ಸಂಸ್ಥೆಯ ವಿದ್ಯಾರ್ಥಿಗಳು,ಹಾಗೂ ಸಾಹಿತ್ಯಭಿಮಾನಿಗಳು ಪಾಲ್ಗೊಂಡಿದ್ದರು. ಪರಂ ಕಂಪ್ಯೂಟರ್ ಇನ್ಸ್ ಟ್ಯೂಟ್ ನ

ನಿರ್ದೇಶಕ ಕಿಶೋರ್ ಕುಮಾರ್  ಸ್ವಾಗತಿಸಿ ಸಂಘಟಕ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries