ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಆಶ್ರಯದಲ್ಲಿ ನಿರ್ಮಾಣಹಂತದಲ್ಲಿರುವ ನೂತನ ಸಭಾಭವನ ಹಾಗೂ ಭೋಜನ ಶಾಲೆಯ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಚರ್ಚಿಸಲು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶವು ಇತ್ತೀಚೆಗೆ ಶ್ರೀ ಮಂದಿರದಲ್ಲಿ ಜರಗಿತು.
ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಉದ್ಯಮಿ ವಸಂತ ಪೈ ಬದಿಯಡ್ಕ ಸಭೆಯನ್ನುದ್ದೇಶಿಸಿ ಮಾತನಾಡಿ ಶುಭಸಮಾರಂಭಗಳು ಸದಾ ನಡೆಯುತ್ತಿರುವ ಜಾಗದಲ್ಲಿ ದೇವತಾ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಉತ್ತಮವಾದ ಕಾರ್ಯಗಳು ಕೈಗೂಡಬೇಕಾದರೆ ಊರಿನ ಜನರ ಪರಿಶ್ರಮ ಅಗತ್ಯ. ಶ್ರದ್ಧಾಭಕ್ತಿಯಿಂದ ಮಾಡಿದಂತಹ ಕಾರ್ಯಕ್ಕೆ ದೈವಾನುಗ್ರಹವಿರುತ್ತದೆ ಎಂದರು.
ಎವೈಎಮ್‍ಎಸ್ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ರಮೇಶ್ ಯಾದವ್, ಹೊಸದುರ್ಗ ತಾಲೂಕು ಯಾದವ ಸಭಾ ಅಧ್ಯಕ್ಷ ಬಾಬು ಕುನ್ನತ್, ಕಾಟುಕುಕ್ಕೆ ದೇವಸ್ಥಾನದ ವ್ಯವಸ್ಥಾಪಕ ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಉಬ್ರಂಗಳ ದೇವಸ್ಥಾನದ ಟ್ರಸ್ಟಿ ಕಿಶೋರ್ ಕುಮಾರ್ ಕುಣಿಕುಳ್ಳಾಯ, ಪ್ರೊ.ಎ. ಶ್ರೀನಾಥ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ದಿನೇಶ್ ಬದಿಯಡ್ಕ, ಶ್ರೀ ಗೋಪಾಲಕೃಷ್ಣ ಭಜನ ಮಂದಿರ ಮಹಿಳಾ ಸಮಿತಿ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಅಗಲ್ಪಾಡಿ ಯಾದವ ಸೇವಾಸಂಘದ ರಕ್ಷಾಧಿಕಾರಿ ನಾರಾಯಣ ಮಣಿಯಾಣಿ ಚೋಕೆ, ಗ್ರಾಮಪಂಚಾಯಿತಿ ಸದಸ್ಯ ಹರೀಶ್ ಗೋಸಾಡ, ರಾಮಚಂದ್ರ ಭಟ್ ಉಪ್ಪಂಗಳ, ಸತೀಶ್ ಶೆಟ್ಟಿ ಊಜಂತೋಡಿ ಪಾಲ್ಗೊಂಡಿದ್ದರು. ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ನಿರೂಪಣೆಗೈದರು. ನೂತನ ಸಭಾಭವನ ಹಾಗೂ ಭೋಜನ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಏಪ್ರಿಲ್ 25ರಿಂದ ಏಪ್ರಿಲ್ 28ರ ತನಕ ನಡೆಯಲಿದೆ.