ವಾಷಿಂಗ್ಟನ್ : ಫೈಜರ್ ಹಾಗೂ ಬಯೋಎನ್‌ಟೆಕ್ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಆರಂಭಿಸಿದೆ. ಫೈಜರ್ ಇಂಕ್ ಹಾಗೂ ಜರ್ಮನ್ ಪಾರ್ಟ್ನರ್ ಬಯೋಎನ್‌ಟೆಕ್ 12 ವರ್ಷದೊಳಗಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಶುರು ಮಾಡಿದೆ.
2022ರ ವೇಳೆಗೆ ಈ ವಯಸ್ಸಿನ ಮಕ್ಕಳಿಗೂ ಕೊರೊನಾ ಲಸಿಕೆ ವಿತರಣೆ ಮಾಡುವುದಾಗಿ ತಿಳಿಸಿದೆ. ಬುಧವಾರ ಮಕ್ಕಳ ಮೇಲೆ ಮೊದಲ ಲಸಿಕೆ ಪ್ರಯಾಗವಾಗಿದೆ. ಫೈಜರ್ , ಬಯೋಟೆಕ್ ಲಸಿಕೆಗಳನ್ನು ಯುಎಸ್ ಡ್ರಗ್ ನಿಯಂತ್ರಕರು ಡಿಸೆಂಬರ್ ಅಂತ್ಯದ ವೇಳೆಗೆ 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಮೇಲೆ ಪ್ರಯೋಗ ಮಾಡಬಹುದು ಎಂದು ಅಧಿಕೃತಗೊಳಿಸಲಾಗಿದೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಪ್ರಕಾರ, ಅಮೆರಿಕದಲ್ಲಿ ಬುಧವಾರ ಬೆಳಗ್ಗೆ ಸುಮಾರು 66 ಮಿಲಿಯನ್ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ಶಿಶು ವೈದ್ಯಕೀಯ ಪ್ರಯೋಗವು 6 ತಿಂಗಳ ಶಿಶುಗಳನ್ನು ಒಳಗೊಂಡಿರುತ್ತದೆ. ಕಳೆದ ವಾರ ಮಾಡೆರ್ನಾ ಪ್ರಯೋಗವನ್ನು ಪ್ರಾರಂಭಿಸಿತ್ತು. ಅಮೆರಿಕದಲ್ಲಿ 16 ಹಾಗೂ 17 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಹಾಗೂ ಬಯೋ ಎನ್‌ಟೆಕ್ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ. 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಮಾಡೆರ್ನಾ ಲಸಿಕೆ ನೀಡಲಾಗುತ್ತಿದೆ. ಹಾಗೂ 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವ ಲಸಿಕೆಯನ್ನು ನೀಡಬೇಕೆಂಪುದು ಇನ್ನೂ ಅಧಿಕೃತವಾಗಿಲ್ಲ.
ಫೈಜರ್ ಹಾಗೂ ಬಯೋಎನ್‌ಟೆಕ್ ಲಸಿಕೆಗಳನ್ನು 10,20 ಹಾಗೂ 30 ಮೈಕ್ರೋ ಗ್ರಾಂನಷ್ಟು ನೀಡಲಾಗುತ್ತಿದೆ. ಈಗಾಗಲೇ 144 ಮಂದಿ ಮೇಲೆ ಲಸಿಕೆ ಪ್ರಯೋಗ ನಡೆದಿದೆ. ಮುಂದಿನ ದಿನಗಳಲ್ಲಿ 4500 ಕ್ಕೂ ಹೆಚ್ಚು ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆಸಲು ಮುಂದಾಗಿದೆ. ಮುಂದಿನ ವಾರದಲ್ಲಿ ಲಸಿಕೆ ಪ್ರಯೋಗ ಕುರಿತ ವರದಿ ಲಭ್ಯವಾಗಲಿದೆ.