ಕಾಸರಗೋಡು: ವಿಧಾನಸಭಾ ಚುನಾವಣೆ ಅಂಗವಾಗಿ ಪ್ರಚಾರ ಸಾಮಾಗ್ರಿಗಳ ದರ ನಿಗದಿಪಡಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಬ್ಯಾನರ್, ಹೋಡಿರ್ಂಗ್ ನಿಂದ ಮುತ್ತುಕೊಡೆ ವರೆಗಿನ ಸಾಮಾಗ್ರಿಗಳ ದರ ಇದರಲ್ಲಿ ಒಳಗೊಂಡಿದೆ. ಬಟ್ಟೆಯ ಬ್ಯಾನರ್(ಕೊರಿಯನ್) ಚದರ ಅಡಿಗೆ 17 ರೂ., ಬಟ್ಟೆಯ ಧ್ವಜಗಳು ಚದರಡಿಗೆ 10 ರೂ., ಪ್ರಚಾರ ಕಚೇರಿ ಕಟ್ಟಡ ಬಾಡಿಗೆ ಚದರ ಅಡಿಗೆ 20 ರೂ., ಬಟ್ಟೆಯಿಂದ ನಡೆಸಿರುವ ತಾತ್ಕಾಲಿಕ ನಿರ್ಮಾಣ ಚದರ ಮೀಟರ್ ಗೆ 25 ರೂ., ಮರದಿಂದ
ನಿರ್ಮಿಸಲಾದ ಕಟೌಟ್ ಚದರ ಅಡಿಗೆ 35 ರೂ., ಬಟ್ಟೆಯಿಂದ ನಿರ್ಮಿಸಲಾದ ಕಟೌಟ್ ಚದರ ಅಡಿಗೆ 25 ರೂ., ನೋಟೀಸು 1000 ಪ್ರತಿಗೆ ಎ ಫೆÇೀರ್ ಬ್ಲಾಕ್ ಆಂಡ್ ವೈಟ್ , ಮೊದಲ 1000 ಕಾಪಿಗೆ ಒಂದು ಸಾವಿರ ರೂ., ಹೆಚ್ಚುವರಿ ಪ್ರತಿ ಕಾಪಿಗೆ 500 ರೂ., ನೋಟೀಸು 1000 ಎ ಫೆÇೀರ್ ಕಲರ್ ಮೊದಲ 1000 ಕಾಪಿಗೆ 2 ಸಾವಿರ ರೂ., ಹೆಚ್ಚುವರಿ ಪ್ರತಿ ಒಂದು ಸಾವಿರ ಕಾಪಿಗೆ ತಲಾ ಒಂದು ಸಾವಿರ ರೂ., ಮೊಬೈಲ್ ಎಸ್.ಎಂ.ಎಸ್.ಗೆ 10 ಪೈಸೆ ದರ ನಿಗದಿಯಾಗಿದೆ.
ಗೇಟ್, ಕಮಾನುಗಳಿಗೆ ತಲಾ 3 ಸಾವಿರ ರೂ., ತೋರಣ ಅಡಿಗೆ 4 ರೂ., ಆಡಿಯೋ ಹಾಡು ರೆಕಾಡಿರ್ಂಗ್ ಸೋಲೋ ಸಿ.ಡಿ.ಗೆ ಒಂದು ಸಾವಿರ ರೂ., ಡ್ಯೂವೆಟ್ ಸಿಡಿಗೆ 2500 ರೂ., ಚೆಂಡೆ ಮೇಳ ಒಬ್ಬರಿಗೆ 500 ರೂ., ಜಿಬ್ ಕೆಮೆರ ತಾಸಿಗೆ 300 ರೂ., ಡ್ರೋನ್ ಕ್ಯಾಮರ ತಾಸಿಗೆ 500 ರೂ., ಎಲ್.ಇ.ಡಿ.ಟಿವಿಗೆ ತಲಾ 500 ರೂ. ದರ ನಿಗದಿ ಪಡಿಸಲಾಗಿದೆ.
ವೀಡಿಯೋ ವಾಲ್ 8*6 ದಿನಕ್ಕೆ 4 ಸಾವಿರ ರೂ., ವೀಡಿಯೋ ವಾಲ್ 12*8 ದಿನಕ್ಕೆ 5ಸಾವಿರ ರೂ., ಸಿ.ಸಿ.ಟಿ.ವಿ. ಕೆಮರಾ ಪ್ರತಿದಿನ 150 ರೂ., 15 ಕೆ.ವಿ.ಜನರೇಟರ್ ಪ್ರತಿದಿನ 2 ಸಾವಿರ ರೂ., ಕಾರ್ಪೆಟ್ ಚದರ ಅಡಿಗೆ 2 ರೂ., ಕಲರ್ ಪ್ರತಿದಿನ 250 ರೂ., ಸಭಾಂಗಣ ಬಾಡಿಗೆ 250 ಮಂದಿ ಸೇರುವ ನಿಟ್ಟಿನಲ್ಲಿ ಪ್ರತಿದಿನ 2 ಸಾವಿರ ರೂ., ಹೋರ್ಡಿಮಗ್ ಚದರ ಅಡಿಗೆ 110 ರೂ., ಮುತ್ತುಕೊಡೆ ಒಂದಕ್ಕೆ 50 ರೂ., ದರ ನಿಗದಿ ಪಡಿಸಲಾಗಿದೆ. ವಾಹನಗಳ ಪ್ರತಿದಿನ ಬಾಡಿಗೆ ಇಂತಿದೆ. ಬಸ್ ರೂಟ್ 6 ಸಾವಿರ ರೂ., ಕಾರು/ಜೀಪು 1800 ರೂ., ಟೆಂಪೆÇೀ/ಟ್ರಕ್ಕರ್ 2500 ರೂ., ಮಿನಿ ಬಸ್ 4 ಸಾವಿರ ರಊ., ಟೂರಿಸ್ಟ್ ಬಸ್ 8 ಸಾವಿರ ರೂ., ಸುಮೋ/ಕ್ವಾಲಿಸ್/ ಇನ್ನೋವಾ 2800 ರೂ., ಆಹಾರ ದರ ಇಂತಿದೆ. ಚಹಾ ಒಬ್ಬರಿಗೆ 8 ರೂ., ಭೋಜನ ಒಬ್ಬರಿಗೆ 40 ರೂ., ಸಸ್ಯಹಾರಿ ಬಿರಿಯಾನಿ ತಲಾ 60 ರೂ., ಮಾಂಸಾಹಾರಿ ಬಿರಿಯಾನಿ ತಲಾ 90 ರೂ., ಮಿಲ್ಕ್ ಶೇಕ್ 200 ಎಂ.ಎಲ್. ಒಬ್ಬರಿಗೆ 40 ರೂ., ಆ್ಯಂಟಿ ಡಿಫೆನ್ಸ್ ಮೆಂಟ್ ದರಗಳು: ಅಕ್ರಮ ಫಲಕ ತೆರವು ತಲಾ 10 ರೂ., ತೋರಣ ತೆರವು 100 ಮೀಟರ್ ಗೆ 100 ರೂ., ಭಿತ್ತಿಪತ್ರ ತೆರವು ಒಂದು 4 ರೂ., ಆವರಣಗೋಡೆಯ ಬರಹ ತೆರವು ಚದರ ಅಡಿಗೆ 5 ರೂ. ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಈ ದರ ನಿಗದಿಪಡಿಸಲಾಗಿದೆ. ಪ್ರಚಾರ ವೆಳೆ ಪ್ಲಾಸ್ಟಿಕ್, ಫ್ಲೆಕ್ಸ್ ಇತ್ಯಾದಿ ಬಳಸಕೂಡದು ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.