ಕಾಸರಗೋಡು: ನಗರದ ಸರ್ಕಾರಿ ಹೆಣ್ಮಕ್ಕಳ ಶಾಲೆಯಿಂದ ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಪ್ರಧಾನ ಅಧ್ಯಾಪಿಕೆ ಶಾರದಾ ಮೊಳೆಯಾರು , ಶಾಲಾ ಅಧ್ಯಾಪಿಕೆ ಬೆಟ್ಟಿ ಅಬ್ರಹಾಂ, ಸಿಬ್ಬಂದಿ ಅಬ್ದುಲ್ ರಸಾಕ್ ಅವರಿಗೆ ಶಾಲಾ ನೌಕರ ಸಂಘದ ನೇತೃತ್ವದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಶಿದು ಪುರಾಣಂ ಉದ್ಘಾಟಿಸಿದರು. ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲೆ ಸುಜಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೃಷ್ಣ ಕಾರಂತ್, ರಾಧಾ ಲಕ್ಷ್ಮಿ, ಜೋಶಿ, ಮುಜೀಬುಲ್ಲಾ, ಶ್ರೀಜಾ ಮುಂತಾದವರು ಶುಭಾಶಂಸನೆಗೈದರು. ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾಗಲಿರುವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನ್ವರ್ ಸ್ವಾಗತಿಸಿ, ರೇಖಾ ರಾಣಿ ವಂದಿಸಿದರು. ಸೂರ್ಯ ಭಟ್ ಎಡನೀರು ಕಾರ್ಯಕ್ರಮವನ್ನು ನಿರೂಪಿಸಿದರು.