ಕುಂಬಳೆ: ಯುಡಿಎಫ್ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರು ಚುನಾವಣಾ ಪ್ರಚಾರಾರ್ಥ ಶನಿವಾರ ಬಂಬ್ರಾಣದಲ್ಲಿ ಕುಟುಂಬ ಸಂಗಮ ನಡೆಯಿತು.
ಕಾರ್ಯಕ್ರಮವನ್ನು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ.ಇ.ಅಬ್ದುಲ್ಲಾ ಉದ್ಘಾಟಿಸಿದರು. ಎಂ.ಪಿ. ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎ.ಕೆ.ಆರಿಫ್, ಮಹಿಳಾ ಲೀಗ್ ರಾಜ್ಯ ಉಪಾಧ್ಯಕ್ಷೆ ಆಯಿಷಾತ್ ತಾಹಿರಾ, ಜಿಲ್ಲಾಧ್ಯಕ್ಷೆ ನಸೀಮಾ ಟೀಚರ್, ಬಿಂದು, ಬೆಂಜಮಿನ್ ಡಿಸೋಜ, ಕುಂಬಳೆ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್, ಯುಡಿಎಫ್ ಪಂಚಾಯತಿ ಸಮಿತಿ ಅಧ್ಯಕ್ಷ ಗಣೇಶ್ ಭಂಡಾರಿ, ಮುಖಂಡರಾದ ಲಕ್ಷ್ಮಣ ಪ್ರಭು, ನಸೀಮಾ ಖಾಲಿದ್, ಯೂತ್ ಲೀಗ್ ಜಿಲ್ಲಾ ಖಜಾಂಚಿ ಯೂಸುಫ್ ಉಳುವಾರ್, ಅಜೀಜ್ ಕಳತ್ತೂರು ಮತ್ತು ನೇಸಿಮಾ ಕೊಡ್ಯಮೆ ಮಾತನಾಡಿದರು. ಎಕೆಎಂ ಅಶ್ರಫ್ ಉಪಸ್ಥಿತರಿದ್ದರು.