ನವದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಒಟಿಟಿ ಉದ್ಯಮದ ಪ್ರತಿನಿಧಿಗಳನ್ನು ಗುರುವಾರ ಭೇಟಿ ಮಾಡಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯನ್ನು ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
ಪ್ರೇಕ್ಷಕರಿಗೆ ವೇದಿಕೆಯ ಉತ್ತಮ ಅನುಭವನ್ನುಂಟು ಮಾಡಲು ಸಚಿವಾಲಯದೊಂದಿಗೆ ಒಟಿಟಿ ಉದ್ಯಮ ಪಾಲುದಾರರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಟಿಟಿ ಉದ್ಯಮದ ಪ್ರತಿನಿಧಿಗಳ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಒಟಿಟಿ ನಿಯಮಗಳಲ್ಲಿನ ವಿನಾಯಿತಿ ಬಗ್ಗೆ ವಿವರಿಸಲಾಗಿದೆ. ಎಲ್ಲಾ ಪ್ರತಿನಿಧಿಗಲು ಹೊಸ ಮಾರ್ಗಸೂಚಿಯನ್ನು ಸ್ವಾಗತಿಸಿದ್ದಾರೆ. ಎಲ್ಲಾ ಪ್ರೇಕ್ಷಕರಿಗೆ ಉತ್ತಮ ವೇದಿಕೆಯ ಅನುಭವನ್ನುಂಟು ಮಾಡಲು ಉದ್ಯಮ,ಸಚಿವಾಲಯದೊಂದಿಗೆ ಪಾಲುದಾರರಾಗುವುದಾಗಿ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಸಭೆ ಬಗ್ಗೆ ಹೆಚ್ಚಿನ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ. ಸರ್ಕಾರ ಫೆಬ್ರವರಿ 25 ರಂದು ಒಟಿಟಿ ಫ್ಲಾಟ್ ಫಾರ್ಮ್ ಮತ್ತು ಡಿಜಿಟಲ್ ನ್ಯೂಸ್ ಮೀಡಿಯಾಗಳಿಗೆ ಗಳಿಗೆ ಹೊಸ ನಿಯಮ ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿತ್ತು.