HEALTH TIPS

ಏಟ್ಟಮನೂರಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಲತಿಕಾ ಸುಭಾಷ್

                   

        ಏಟ್ಟಮನೂರ್: ಏಟ್ಟಮನೂರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲತಿಕಾ ಸುಭಾಷ್ ಸ್ಪರ್ಧಿಸಲಿದ್ದಾರೆ. ಏಟ್ಟಮನೂರಿನಲ್ಲಿ ನಿನ್ನೆ ನಡೆದ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ತಾನು ಇನ್ನೂ ಕಾಂಗ್ರೆಸ್ ಕಾರ್ಯಕರ್ತೆ. ಮತ್ತು ಇತರ ಪಕ್ಷಗಳಿಗೆ ಪಕ್ಷಾಂತರಗೊಳ್ಳುವುದಿಲ್ಲ ಎಂದೂ ಹೇಳಿದರು.

         ಪಕ್ಷವು ಏಟ್ಟಮನೂರಿನಲ್ಲಿ ಸ್ಥಾನ ನೀಡುತ್ತದೆ ಎಂದು ನಂಬಿದ್ದು ತನ್ನ ಮೂರ್ಖತನ ಎಂದು ಲತಿಕಾ ಸುಭಾಷ್ ಸಮಾವೇಶದಲ್ಲಿ ಹೇಳಿದರು. ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಏಟ್ಟಮನೂರಿನಲ್ಲಿ ಸಾರ್ವಜನಿಕ ಕಾರ್ಯಕರ್ತೆಯಾಗಿರುವ ಲತಿಕಾ, ಈ ಬಾರಿ ಕಾರ್ಯಕರ್ತರನ್ನು ಹಿಂದಿನ ಕಾಲಕ್ಕಿಂತ ಭಿನ್ನವಾಗಿ ಮಿಶ್ರ ಭಾವನೆಗಳೊಂದಿಗೆ ಕಾಣಲಾಗುತ್ತಿದೆ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು.

          ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ನೋಯಿಸಲು ತಾನು ಎಂದಿಗೂ ಬಯಸುವುದಿಲ್ಲ. ತೀವ್ರವಾಗಿ ದುಃಖಿತಳಾದ್ದರಿಂದ ತಲೆ ಬೋಳಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿರುವೆ ಎಂದು ತಿಳಿಸಿದರು. 

         ಲತಿಕಾ ಸುಭಾಷ್ ಅವರು ಸ್ವತಂತ್ರವಾಗಿ ಏಟ್ಟಮನೂರಿನಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಏಟ್ಟಮನೂರ್ ಚರ್ಚ್‍ನಲ್ಲಿ ಪ್ರತಿಜ್ಞೆ ನಿರ್ವಹಿಸುವುದರೊಂದಿಗೆ ಲತಿಕಾ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು. ಸುಮಾರು 150 ಕಾರ್ಯಕರ್ತರು ಭಾಗವಹಿಸಿದ್ದ ಸಮಾವೇಶದಲ್ಲಿ ಲತಿಕಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಯಿತು.

            ಬೆಂಬಲದೊಂದಿಗೆ ಕಾರ್ಯಕರ್ತರು:

    ಕಾಂಗ್ರೆಸ್ ಮತ್ತು ಕೇರಳ ಕಾಂಗ್ರೆಸ್ ನ ಜೋಸೆಫ್ ಬಣದಂತಹ ಹಲವಾರು ಯುಡಿಎಫ್ ಕಾರ್ಯಕರ್ತರು ಲತಿಕಾ ಅವರನ್ನು ಬೆಂಬಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗುವ ಆರ್ಥಿಕ ಸಂಕಷ್ಟವನ್ನು ಅವರು ಗಮನಸೆಳೆದಾಗ, ಕಾರ್ಯಕರ್ತರು ತಕ್ಷಣ ಹಣವನ್ನು ಠೇವಣಿ ಇಡುವ ಇಚ್ಚೆಯನ್ನು ಘೋಷಿಸಿದರು. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಟಿ.ಜಿ. ವಿಜಯಕುಮಾರ್ ಅವರು ಲತಿಕಾರಿಗೆ ಠೇವಣಿ ಮೊತ್ತ ನೀಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries