ಬಿಜ್ನೋರ್: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರ್ಕಾರದ ಮೌನ ನಮಗೆ ಹೆದರಿಕೆ ಹುಟ್ಟಿಸುತ್ತಿದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೇಂದ್ರ 'ಮೌನ' ವಹಿಸಿದ್ದು ರೈತರ ಆಂದೋಲನದ ವಿರುದ್ಧ ಕ್ರಮಗಳನ್ನು ಯೋಜಿಸುತ್ತಿದೆ ಎಂದು ಭಾಸವಾಗುತ್ತಿದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರವೇ ಮುಂದಾಗಬೇಕಿದೆ ಎಂದು ಟಿಕಾಯತ್ ಒತ್ತಿ ಹೇಳಿದ್ದಾರೆ.
'ಕಳೆದ 15-20 ದಿನಗಳಿಂದ ಸರ್ಕಾರದ ಮೌನವು ಮುಂದೆ ಏನಾದರೂ ಆಗಲಿದೆ ಎಂದು ಸೂಚಿಸುತ್ತದೆ. ಕೇಂದ್ರವು ಆಂದೋಲನದ ವಿರುದ್ಧ ಕೆಲವು ಕ್ರಮಗಳು ಯೋಜಿಸುತ್ತಿದೆ. ಕೇಂದ್ರ ಸರ್ಕಾರ ಏನೇ ಮಾಡಿದರು. ಕೃಷಿ ಕಾಯ್ದೆ ಕುರಿತಂತೆ ಪರಿಹಾರ ದೊರೆಯುವವರೆಗೂ ರೈತರು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ.
ಮಾರ್ಚ್ 24ರವರೆಗೆ ದೇಶದ ಹಲವಾರು ಸ್ಥಳಗಳಲ್ಲಿ ರೈತರ "ಮಹಾಪಂಚಾಯತ್" ನಡೆಯಲಿದೆ ಎಂದು ಟಿಕಾಯತ್ ಹೇಳಿದರು.