ತಿರುವನಂತಪುರ: ಅಜ್ಜಿಯ ಮೃತ ದೇಹದೊಂದಿಗೆ ಊರಿಗೆ ಆಗಮಿಸಿದ್ದು, ಎಂಟು ವರ್ಷ ಹರೆಯದ ಮೊಮ್ಮಗಳು. ಇದು ಸಿನಿಮಾ ಕಥೆಯಲ್ಲ. ನೈಜ ಮನುಷ್ಯ ಜೀವನದ ಘಟನೆ.
ತಿರುವನಂತಪುರ ಬಳಿಯ ಮೂಂಗೋಡ್ ಮೂಲದ ನಲವತ್ತು ವರ್ಷದ ರಾಜಿ ಹೃದಯಾಘಾತದಿಂದ ನಿಧನರಾದರು. ರಾಜಿ ಒಂಬತ್ತು ವರ್ಷಗಳ ಹಿಂದೆ ತನ್ನ ಹಿರಿಯ ಮಗಳು ಗರ್ಭಿಣಿಯಾಗಿದ್ದಾಗ ಮೊದಲು ಕೊಲ್ಲಿಗೆ ತೆರಳಿದ್ದರು. ಆದರೆ ಇಂದೀಗ ಎಂಟು ವರ್ಷದ ಮಗಳು ಅದೇ ಅಜ್ಜಿಯ ಮೃತ ದೇಹದೊಂದಿಗೆ ಮನೆಗೆ ಮರಳ ಬೇಕಾದ ಸ್ಥಿತಿ ಬಂದೆರಗಿದ್ದು ವಿಧಿಯಾಟವೆನ್ನದೆ ಬೇರೆ ಏನೆನ್ನೋಣ!?
ರಾಜಿಯ ಹಠಾತ್ ಸಾವು ಪುತ್ರಿಗೆ ಸಿಡಿಲೆರಗಿದಂತಾಗಿ ಕುಸಿದು ಬೀಳಲು ಕಾರಣವಾಯಿತು. ತೀವ್ರ ನಿಗಾ ಘಟಕಕ್ಕೆ (ಐಸಿ) ದಾಖಲಾದ ಮಗಳ ಪಕ್ಕದಲ್ಲಿ ಶಾರ್ಜಾದ ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ತಂದೆ ಸಾಜಿಕುಮಾರ್ ಉಳಿದುಕೊಳ್ಳಬೇಕಾಯಿತು. ಇದರೊಂದಿಗೆ, ಎಂಟು ವರ್ಷದ ಬಾಲಕಿ ಅಜ್ಜಿಯ ಮೃತ ದೇಹದೊಂದಿಗೆ ಏಕಾಂಗಿಯಾಗಿ ಸೋಮವಾರ ಸಂಜೆ ಊರಿಗೆ ಆಗಮಿಸಿದಳು.
ಅಜ್ಜಿಯ ಬೆಚ್ಚನೆಯ ಆರೈಕೆಯ ಮೂಲಕ ಈ ಭೂಮಿಗೆ ಸುರಕ್ಷಿತವಾಗಿರಬೇಕಿದ್ದ ಪುಟ್ಟ ಬಾಲಕಿ ಮೃತಪಟ್ಟ ಅಜ್ಜಿಯ ದೇಹದೊಂದಿಗೆ ಮನೆಗೆ ಬರಬೇಕಾದ್ದು ವಿಧಿಯಾಟವಲ್ಲದೆ ಬೇರೇನು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಶ್ರಫ್ ತಾಮರಸೇರಿ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.