ಕೊಚ್ಚಿ: ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರು ಇಂದು ಕಸ್ಟಮ್ಸ್ ಮುಂದೆ ಹಾಜರಾಗುವುದಿಲ್ಲ, ಅಧಿಕೃತ ಒತ್ತಡಗಳಿರುವ ಕಾರಣ ವಿಚಾರಣೆಗೆ ಹಾಜರಾಗಲು ಅಸಾಧ್ಯವೆಂದು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಹಾಜರಾಗುವುದಾಗಿ ಅವರು ಕಸ್ಟಮ್ಸ್ಗೆ ತಿಳಿಸಿರುವರು.
ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸ್ಪೀಕರ್ ಮತ್ತು ಇತರ ಮೂವರು ಕ್ಯಾಬಿನೆಟ್ ಮಂತ್ರಿಗಳು ಭಾಗಿಯಾಗಿದ್ದಾರೆ ಎಂದು ಕಸ್ಟಮ್ಸ್ ಹೈಕೋರ್ಟ್‍ನಲ್ಲಿ ಸಲ್ಲಿಸಿದ ಅಫಿಡವಿಟ್‍ನಲ್ಲಿ ತಿಳಿಸಿತ್ತು. ಬಳಿಕ ಸ್ಪೀಕರ್‍ಗೆ ಕಸ್ಟಮ್ಸ್ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ತಪೆÇ್ಪಪ್ಪಿಗೆಯ ಆಧಾರದ ಮೇಲೆ ಕಸ್ಟಮ್ಸ್ ಆಯುಕ್ತರು ಅಫಿಡವಿಟ್ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಕೊಚ್ಚಿಯ ಕಸ್ಟಮ್ಸ್ ಕಚೇರಿಯಲ್ಲಿ ನೇರವಾಗಿ ಹಾಜರಾಗುವಂತೆ ಸ್ಪೀಕರ್‍ಗೆ ನೋಟಿಸ್ ಕಳುಹಿಸಲಾಗಿದೆ. ವ್ಯವಹಾರಗಳು ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರ ಸೂಚನೆಯ ಮೇರೆಗೆ ನಡೆದಿದೆ ಎನ್ನಲಾಗಿದೆ. ಅನೇಕ ಉನ್ನತ ಹುದ್ದೆಯಲ್ಲಿರುವವರಿಗೆ ಲಂಚ ದೊರೆತಿವೆ ಎಂದು ಸ್ವಪ್ನಾಳ ಹೇಳಿಕೆಯಲ್ಲಿ ಹೇಳಲಾಗಿದೆ.