ತಿರುವನಂತಪುರ: ಮಾವೇಲಿಕ್ಕರ ಮೀಸಲು ಕ್ಷೇತ್ರದಲ್ಲಿ ಡಿವೈಎಫ್‍ಐ ಮುಖಂಡ ಕೆ ಸಂಜು ಬಿಜೆಪಿ ಪರ ಸ್ಪರ್ಧಿಸುತ್ತಿದ್ದಾರೆ. ಸಂಜು ಸೇರಿದಂತೆ ಹಲವಾರು ಅನಿರೀಕ್ಷಿತ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ.
ಕೆ ಸಂಜು ಸಿಪಿಎಂ ಸದಸ್ಯ ಮತ್ತು ಮಾಜಿ ಬ್ಲಾಕ್ ಪಂಚಾಯತಿ ಸದಸ್ಯರಾಗಿದ್ದರು. ಸಂಜು ಡಿವೈಎಫ್‍ಐ ಚರಮೂಡು ಪ್ರಾದೇಶಿಕ ಘಟಕದ ನಾಯಕರೂ ಆಗಿದ್ದರು. ಕಾಂಗ್ರೆಸ್ ತೊರೆದ ಪಂಡಲಂ ಪ್ರತಾಪನ್, ಬಿಜೆಪಿ ಪರ ಅಡೂರ್ ನಿಂದ ಸ್ಪರ್ಧಿಸಲಿದ್ದಾರೆ. ಕಲ್ಲಿಕ್ಕೋಟೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಡಾ.ಅಬ್ದುಲ್ ಸಲಾಮ್ ತಿರೂರ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 115 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.