ಮಧೂರು: ಊರ ಹಿರಿಯ ಮನೆತನಗಳ ಚರಿತ್ರೆಗಳು ಹಿಂದಿನ ಧಾರ್ಮಿಕ, ಸಾಂಸ್ಕøತಿಕ ಇತಿಹಾಸಗಳನ್ನು ದಾಖಲಿಸುವ ಕಾರ್ಯ ಶ್ಲಾಘನೀಯ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹೇಳಿದರು.
ಅವರು ಕಾಸರಗೋಡು ಕೂಡ್ಲುನಲ್ಲಿ ಕುತ್ಯಾಳ ಸಂಪದ ಆಕರ ಗ್ರಂಥ ಎರಡನೇ ಸಂಪುಟವನ್ನು ಶನಿವಾರ ಬಿಡುಗಡೆಗೊಳಿಸಿ ಶ್ರೀಪಾದಂಗಳವರು ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಸ್ವಾಮೀಜಿಯವರು ಹಿರಿಯ ಸಂಗೀತ ವಿದ್ವಾನ್ ಬಾಬು ರೈ ಅವರಿಗೆ ಕೃತಿಯನ್ನು ಹಸ್ತಾಂತರಿಸಿ ಕೃತಿ ಬಿಡುಗಡೆಗೊಳಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು ಕೃತಿ ಪರಿಚಯ ಮಾಡಿದರು.
ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಕುತ್ಯಾಳ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅತಿಥಿಗಳಾಗಿ ಭಾಗವಹಿಸಿದ್ದರು. ಕುತ್ಯಾಳ ಸಂಪದ ಪ್ರಥಮ ಸಂಪುಟದ ಸಂಪಾದಕ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಂಗೀತ ವಿದ್ವಾಂಸ, 98 ರ ಹರೆಯದ ವಿದ್ವಾನ್ ಬಾಬು ರೈ ಅವರನ್ನು ಕೂಡ್ಲು ಶ್ಯಾನುಭೋಗ್ ಮನೆತನದ ಪರವಾಗಿ ಪ್ರಸನ್ನ ಶ್ಯಾನುಭೋಗ್ ದಂಪತಿಗಳು ಗೌರವಿಸಿದರು.
ಸಂಪಾದಕ ವಿಷ್ಣು ಶ್ಯಾನುಭೋಗ್ ಸ್ವಾಗಿಸಿ, ವೀಣಾ ಪ್ರಸನ್ನ ಶ್ಯಾನುಭೋಗ್ ವಂದಿಸಿದರು. ಸಂಘಟಕ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.