ಮುಳ್ಳೇರಿಯ : ವಿದ್ಯುತ್ ಬೆಳಕಿಲ್ಲದ ಬಡ ಕುಟುಂಬದ ವಿದ್ಯಾರ್ಥಿನಿಯೋರ್ವಳ ಮನೆಗೆ ಕಾರಡ್ಕ ಜಿ.ವಿ.ಎಚ್.ಎಸ.ಎಸ್ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದ ಅವಿರತ ಶ್ರಮದಿಂದ ಇಂದು ಕರೆಂಟ್ ಕಲೆಕ್ಷನ್ ನೀಡಿ ವಿದ್ಯುತ್ ಬೆಳಕು ಉರಿಸಿದ ಕಾರ್ಯ ಮಾದರಿಯಾಗಿದೆ.
"ಬೆಳಕು" ವಿಶ್ಲೆ?ಷಣೆ ಮಾಡಲು ತೊಡಗಿದರೆ ಪದಗಳಿಲ್ಲ. ಆಧುನಿಕ ಜಗತ್ತಿನಲ್ಲಿ ಬೆಳಕಿಲ್ಲದೆ ಜೀವಿಸುವುದನ್ನು ಊಹಿಸಲೂ ಕಷ್ಟ. ಬೀದಿದೀಪದ ಬೆಳಕಿನಲ್ಲಿ ಓದುವ ಕಾಲವಂತೂ ಈಗ ಬೆರಗಿನ ಮಾತು.ಆದರೆ ಇಲ್ಲೊಂದು ಮನೆ ಎನ್ನಲು ಆ ಮನೆಗೆ ಏನೇನು ಮೂಲಭೂತ ಸೌಲಭ್ಯಗಳಿಲ್ಲದ ದುಸ್ತರ ಬದುಕು.!!?
ಕರೆಂಟು ಇಲ್ಲ,ಚಿಮಣಿ ದೀಪ ಕಾಣಲು, ರೇಶನ್ ಕಾರ್ಡ್ ಇಲ್ಲ!
ರೇಶನ್ ಕಾರ್ಡ್ ಆಗಬೇಕಿದ್ರೆ,
ಆ ಮನೆಗೆ ಮನೆ ನಂಬರ್ ಇಲ್ಲ!
ಮನೆಯೆಂಬ ಆ ಕಟ್ಟಡದ ಮಂದಿಗೆ
ಬಯಲೇ ಶೌಚಾಲಯ.!! ಇದು
ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಶಾಲಾ ವಿದ್ಯಾರ್ಥಿನಿ ಅಕ್ಷತಾಳ ಮನೆಯ ದುಸ್ಥಿತಿ. ಇದನ್ನು ಅರಿತು ಈ ಬಡ ವಿದ್ಯಾರ್ಥಿನಿಯ ಮನೆಗೆ ಅಧ್ಯಾಪಕರ ಓಡಾಟ ಹಾಗೂ ಪರಿಶ್ರಮದಿಂದ ಇಂದು ವಿದ್ಯುತ್ ಬೆಳಕುÀ್ಲಭ್ಯವಾಗಿದೆ.
ಮುಳ್ಳೇರಿಯ ವಿದ್ಯುತ್ ಕಚೇರಿಯ ಎಇ ಸತ್ಯನಾರಾಯಣ ಅಡೂರು ಸ್ವಿಚ್ ಆನ್ ಮಾಡುವ ಮೂಲಕ ಮನೆಗೆ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದರು. ಓವರ್ ಸೀಯರ್ ಅಬ್ದುಲ್ಲ ಶುಭ ಹಾರೈಸಿ, ಮುಂದಕ್ಕೆ ಪ್ರತೀ ತಿಂಗಳ ವಿದ್ಯುತ್ ಬಿಲ್ ತಾನು ಪಾವತಿಸುವುದಾಗಿ ಘೋಷಿಸಿದರು. ಪಂಚಾಯತ್ ವಿಇಒ ಶಾಂತಾ ಕುಮಾರಿ, ಅಧ್ಯಾಪಕರಾದ ಜ್ಯೋತಿಚಂದ್ರ , ಶಶಿ , ಡಾ.ಅಶೋಕ, ರತೀಶ್ ಶುಭಾಶಯ ಕೋರಿದರು. ಮನೆಯೊಡತಿ ಸುಂದರಿಯ ಪರವಾಗಿ ವಿದ್ಯಾರ್ಥಿನಿ ಅಕ್ಷತಾ ಕೃತಜ್ಞತೆ ಸಲ್ಲಿಸಿದಳು. Pಖಿಂ ಅಧ್ಯಕ್ಷ ಮೋಹನನ್ ಕಾರಡ್ಕ ಅಧ್ಯಕ್ಷತೆ ವಹಿಸಿದ್ದರು. ಕುಂಞಂಬು ಮಾಸ್ಟರ್ ಸ್ವಾಗತಿಸಿ, ಶ್ರೀಶ ಕುಮಾರ ವಂದಿಸಿದರು.
ಈ ಉತ್ತಮ ಕಾರ್ಯಕ್ಕೆ ನಿರ್ಮಲ್ ಮಾಸ್ತರ್ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡಿದ್ದರು. ಮನೆಯ ವಯರಿಂಗ್ ಇತ್ಯಾದಿ ಖರ್ಚು ಭರಿಸಿದ ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಮಾಸ್ತರ್ ಹಾಗೂ ಶಿಕ್ಷಕ ವೃಂದದ ಮನವೂ ಇಂದು ಸಾರ್ಥಕ ಭಾವದಿಂದ ತುಂಬಿದೆ. ಮುಳ್ಳೇರಿಯ ವಿದ್ಯುತ್ ಕಚೇರಿಯ ಅಧಿಕಾರಿಗಳು, ಪಂಚಾಯತ್ ಹಾಗೂ ವಿಲೇಜ್ ಅಧಿಕಾರಿಗಳು, SPಅ ಜಿಲ್ಲಾ SI ಶ್ರೀಧರನ್ ಈ ಕಾರ್ಯಕ್ಕೆ ಪೂರಕವಾಗಿ ಸಹಕರಿಸಿದವರು. ಇಂತಹ ಒಂದು ಮಹತ್ಕಾರ್ಯ ಈ ಸಮಾಜಕ್ಕೆ ಮಾದರಿಯಾಗಿದೆ.