ಕೊಚ್ಚಿ: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸ್ವಪ್ನಾಗೆ ಬೆದರಿಕೆ ಹಾಕಿದ್ದಾರೆ ಎಂದು ಸಾಕ್ಷ್ಯ ನೀಡಿದ ಮಹಿಳಾ ಕಾನ್‍ಸ್ಟೆಬಲ್ ಗಳನ್ನು ಇಡಿ ಪ್ರಶ್ನಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕೊಚ್ಚಿ ಪೋಲೀಸರಾದ ರಾಜಿ ಮೋಲ್ ಮತ್ತು ಸಿಜಿ ವಿಜಯನ್ ಅವರನ್ನು ಪ್ರಶ್ನಿಸಲಾಗುವುದು. ಅವರ ವಿರುದ್ಧ ಪ್ರಕರಣ ದಾಖಲಾಗಲಿದೆ ಎಂದು ಇ.ಡಿ.ಮೂಲಗಳು ತಿಳಿಸಿವೆ.