ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಗದಿತ ದಿನಾಂಕಗಳಂದು ಕೆಎಸ್ಸಾರ್ಟಿಸಿ ಬಸ್ ಗಳು ವಿಶೇಷ ಸರ್ವೀಸ್ ನಡೆಸಲಿವೆ. ಚುನಾವಣಾ ಸಾಮಗ್ರಿ ವಿತರಣೆ ದಿನವಾಗಿರುವ ಏ.5 ಮತ್ತು ಮತದಾನ ದಿನವಾಗಿರುವ ಏ.6ರಂದು ಈ ವಿಶೇಷ ಸರ್ವೀಸ್‍ನಡೆಯಲಿವೆ.
ಏ 5ರಂದು ಮಂಜೇಶ್ವರದಿಂದ ಬೆಳಗ್ಗೆ 6.30, 6.45, 7, 7.15,7.30 ಗಂಟೆಗೆ ಕಾಲಿಕಡವಿಗೆ ಬಸ್ ಗಳು ಹೊರಡಲಿವೆ. ಅಂದು ಕಾಲಿಕಡವಿನಿಂದ ಬೆಳಗ್ಗೆ 6.30, 6.45, 7, 7.15, 7.30, 8 ಗಂಟೆಗೆ ಮಂಜೇಶ್ವರ ವರೆಗೆ ಸರ್ವೀಸ್ ನಡೆಸುವ ಬಸ್ ಹೊರಡಲಿವೆ. ಅದೇ ದಿನ ಚಿತ್ತಾರಿಕಲ್ಲಿನಿಂದ ಕಾಞಂಗಾಡಿಗೆ ಬೆಳಗ್ಗೆ 6.30, 7, 7.30, 8, 8.30, 9 ಗಂಟೆಗೆ ಬಸ್ ಹೊರಡಲಿವೆ.
ಏ 6 ರಂದು ರಾತ್ರಿ 9, 9.15,9.30, 9.45, 10, 10.15 ಗಂಟೆಗೆ ಮಂಜೇಶ್ವರದಿಂದ ಕಾಲಿಕಡವಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಹೊರಡಲಿವೆ. ಅಂದು ಕಾಲಿಕಡವಿನಿಂದ ರಾತ್ರಿ 9, 9.15, 9.30, 9.45, 10, 10.15 ಗಂಟೆಗೆ ಮಂಜೇಶ್ವರಕ್ಕೆ ಹೊರಡಲಿವೆ. ಅಂದು ರಾತ್ರಿ 9,9.30, 10, 10.30, 11, 11.30ಕ್ಕೆ ಕಾಞಂಗಾಡಿನಿಂದ ಚಿತ್ತಾರಿಕಲ್ಲಿಗೆ ಬಸ್ ಸೇವೆ ನಡೆಸಲಿವೆ.
ಚುನಾವಣಾ ಕರ್ತವ್ಯದ ಸಿಬ್ಬಂದಿಗೆ ಸಹಾಯವಾಗುವ ರೀತಿ ನಿಲುಗಡೆ ಖಚಿತಪಡಿಸಲು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ.