ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯ ನಿಯಂತ್ರಣ ಮಹಿಳೆಯರ ಕೈಯಲ್ಲಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ್ಲಿ 24 ತಾಸುಗಳೂ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯು ಜಿಲ್ಲಾಧಿಕಾರಿ ಕಚೇರಿಯ ಹುಸೂರ್ ಶಿರಸ್ತೇದಾರ್ ಎಸ್.ಶ್ರೀಜಾ ಅವರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ.
ನೀತಿ ಸಂಹಿತೆ ಉಲ್ಲಂಘನೆ ಸಂಬಂದ ದೂರುಗಳು, ಮತದಾತರ ಸಹಾಯವಾಣಿ ನಿಯಂತ್ರಣ, ಫೀಲ್ಡ್ ಇನ್ವೆಸ್ಟಿಕೇಷನ್ ಟೀಂ ಮಾನಿಟರಿಂಗ್ ಸಹಿತ ಹೊಣೆ ಈ ನಿಯಂತ್ರಣ ಕೊಠಡಿಯದು. ಇದರ ಹೊಣೆ ಅಧಿಕಾರಿ ಮುಂತಾಝ್ ಹಸನ್, ಸುಜಾ ವರ್ಗೀಸ್, ಸಹಾಯಕಿಯರಾದ ಕೆ.ಪ್ರಸೀದಾ, ಕೆ.ಎಸ್.ಶ್ರೀಕಲಾ, ಪಿ.ಸುಜಾ, ಪಿ.ಮಮತಾ,ಪದ್ಮಾವತಿ ನಿಯಂತ್ರಣ ಕೊಠಡಿ ತಂಡ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ನಿಯಂತ್ರಣ ಕೊಠಡಿ ನಿಯಂತ್ರಿಸುತ್ತಾರೆ. ತದನಂತರ ರಾತ್ರಿ ಹೊಣೆಯ ಅಧಿಕಾರಿಗಳಾದ ಡಿ.ಎಸ್.ಸೆಲ್ವರಾಜ್, ಅನಿಲ್ ಕುಮಾರ್, ಸಹಾಯಕರಾದ ಕೆ.ಪಿ.ಶಶಿಧರನ್, ಸಲೀಂಕುಮಾರ್, ಶ್ರೀರಾಂ, ಅರುಣ್ ಲಾರೆನ್ಸ್ ನಿಯಂತ್ರಣ ಕೊಠಡಿಯನನು ನಿಯಂತ್ರಿಸುತ್ತಾರೆ.
ಚುನಾವಣೆ ನೀತಿ ಸಂಃಇತೆ ಉಲ್ಲಂಘನೆ ಸಂಬಂಧ ದೂರುಗಳನ್ನು ಸ್ವೀಕರಿಸುವ ಸಿವಿಜಿಲ್ ಅಪ್ಲಿಕೇಷನ್ , 1950 ಎಂಬ ಟಾಲ್ ಫ್ರೀ ನಂಬ್ರ, ಸಹಾಯವಾಣಿ ನಂಬ್ರಗಳಾದ 04994-255325, 255324 ಎಂಬಲ್ಲಿಗೆ ಲಭಿಸುವ ದೂರುಗಳು , ಚುನಾವಣೆ ಸಂಬಂಧ ಸಂಶಯಗಳು ಇತ್ಯಾದಿಗಳಿಗೆ ನಿಯಂತ್ರಣ ಕೊಠಡಿಯಲ್ಲಿ ಉತ್ತರ ಲಭಿಸಲಿದೆ. 1950 ಸಹಾಯ ನಂಬ್ರಕ್ಕೆ ದೂರು, ಸಂಶಯ ನಿವಾರಣೆ ಸಂಬಂಧ ಈ ವರೆಗೆ 96 ದೂರುಗಳು ಲಭಿಸಿವೆ. ಸಿವಿಜಿಲ್ ಗೆ ಲಭಿಸುವ ದೂರುಗಳು 5 ನಿಮಿಷದ ಅವಧಿಯಲ್ಲಿ ಫೀಲ್ಡ್ ಇನ್ವೆಸ್ಟಿಕೇಷನ್ ಟೀಂ ಗೆ ಹಸ್ತಾಂತರಗೊಳ್ಳುತ್ತಿದ್ದು, ಇದರ ಹೊಣೆ ನಿಯಂತ್ರಣ ಕೊಠಡಿಯದ್ದಾಗಿದೆ. ನೂರು ನಿಮಿಷಗಳ ಅವಧಿಯಲ್ಲಿ ದೂರು ಪರಿಹಾರ ಲಭಿಸಲಿದೆ. ಈ ಬಾರಿಯ ಚುನಾವಣೆ ಸಂಬಂಧ ಸಿವಿಜಿಲ್ ಗೆ ಈ ವರೆಗೆ 666 ದೂರು ಲಭಿಸಿವೆ. ಇವುಗಳಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 292 ದೂರುಗಳು, ಕಾಸರಗೋಡು ಕ್ಷೇತ್ರದಲ್ಲಿ 191 ದೂರುಗಳು, ಉದುಮಾ ಕ್ಷೇತ್ರದಲ್ಲಿ ದೂರುಗಳು, ಕಾಞಂಗಾಡ್ ಕ್ಷೇತ್ರದಲ್ಲಿ 69 ದೂರುಗಳು, ತ್ರಿಕರಿಪುರ ಕ್ಷೇತ್ರದಲ್ಲಿ 23 ದೂರುಗಳು ಲಭಿಸಿವೆ. ಸಿವಿಜಿಲ್ ಆಪ್ ನಲ್ಲಿ ನೋಂದಣಿಗೊಂಡಿದ್ದು, ಎಲ್ಲ ದೂರುಗಳೂ ಪರಿಹಾರಗೊಂಡಿವೆ.