ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್‌ಟಿಎ) ಜಿಲ್ಲಾ ಸಮಾವೇಶ ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಸಂಘಟನೆಯ ರಾಜ್ಯ ಅಧ್ಯಕ್ಷ ವಿ.ಕೆ.ಅಜಿತ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ.ವಿಜಯನ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ರಮೇಶನ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಜಿ.ಕೆ.ಗಿರೀಶ್, ಪಿ.ಶಶಿಧರನ್, ಜಿ.ಕೆ.ಗಿರಿಜಾ, ಕೆ.ಒ. ರಾಜೀವನ್, ಕೆ.ಸಿ. ಸೆಬಾಸ್ಟಿಯನ್, ಪ್ರಶಾಂತ್ ಕಾನತ್ತೂರು ಮತ್ತು ಪಿ.ಜೆ.ಜೋಸೆಫ್ ಮಾತನಾಡಿದರು.
ಪ್ರತಿನಿಧಿ ಸಮಾವೇಶವನ್ನು ರಾಜ್ಯ ಕಾರ್ಯದರ್ಶಿ ಕುಂಞ್ಞಿ ಕಣ್ಣನ್ ಕರಿಚೇರಿ ಉದ್ಘಾಟಿಸಿದರು. ಎ.ವಿ.ಗಿರಿಶನ್ ಅಧ್ಯಕ್ಷತೆ ವಹಿಸಿದ್ದರು.ಕೆ.ಅಶೋಕನ್, ಅಲೋಶಿಯಸ್ ಜಾರ್ಜ್, ಶ್ರೀನಿವಾಸನ್, ಕೆ ಅನಿಲ್ ಕುಮಾರ್, ಸ್ವಪ್ನಾ ಜಾರ್ಜ್, ಸುರೇಂದ್ರನ್ ಚೀಮೆನಿ, ಕೆ.ಪಿ.ರಮೇಶನ್, ಟಿ ರಾಜೇಶ್ ಮತ್ತು ಶೀಲಾ ಥಾಮಸ್ ಮಾತನಾಡಿದರು.