HEALTH TIPS

ಕಾಸರಗೋಡಲ್ಲಿ ರಂಗಭೂಮಿ ದಿನಾಚರಣೆ: ರಂಗಭೂಮಿಯ ವಿಸ್ತರಣೆಗೆ ಸಮಾಜ ಮುಂದಾಗಬೇಕು:ಎಂ.ಉಮೇಶ ಸಾಲ್ಯಾನ್

                     

      ಕಾಸರಗೋಡು: ಸಮಗ್ರ ಜನಜೀವನದ ಅಂತಃಶಕ್ತಿಯ ಪ್ರೇರಣೆಯಾಗಿ ರಂಗಭೂಮಿ ನೀಡಿರುವ ಕೊಡುಗೆ ಎಂದಿಗೂ ಮಹತ್ವದ್ದಾದುದು. ಶಾಂತಿ-ಕ್ರಾಂತಿಗಳ ಪ್ರೇರಕ ಶಕ್ತಿಯಾದ ರಂಗಭೂಮಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆಧುನಿಕ ಸಮಾಜ ಮರೆವು ತೋರ್ಪಡಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗಕರ್ಮಿ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ತಿಳಿಸಿದರು.

       ಕಾಸರಗೋಡಿನ ರಂಗ ಕುಟೀರದ ಆಶ್ರಯದಲ್ಲಿ ಪಾರೆಕಟ್ಟೆಯಲ್ಲಿ ಶನಿವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


    ರಂಗಭೂಮಿ ಎನ್ನುವುದು ಪ್ರತಿಯೊಬ್ಬನ ಬೆಳವಣಿಗೆಗೆ ಪೂರಕವಾದ ಶಕ್ತಿಯಾಗಿರುತ್ತದೆ. ಮನೋಲ್ಲಾಸದ ಜೊತೆಗೆ ಬುದ್ದಿಗೆ ಸಂಚಲನ ನೀಡುವ ಶಕ್ತಿಯಾದ ರಂಗಭೂಮಿ ವರ್ತಮಾನದಲ್ಲಿ ತಲ್ಲಣಗಳಿಗೆ ಒಳಗಾಗಿರುವುದು ವಿಷಾದಕರ. ಕಲಾವಿದರ ಆಶೋತ್ತರಗಳಿಗೆ ಸವಾಲಾಗುವ ವಿದ್ಯಮಾನಗಳು ಕಳವಳಕ್ಕೆ ಕಾರಣವಾಗುತ್ತಿದ್ದು ಸಮಾಜಕ್ಕೆ ಕಲಾವಿರನ್ನು ಉಳಿಸುವ ಹೊಣೆ ಇದೆ ಎಂದು ಅವರು ತಿಳಿಸಿದರು.

      ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ರಂಗಭೂಮಿ ಕಲಾವಿದ ವಾಸು.ಬಾಯಾರು ಅವರು ಮಾತನಾಡಿ, ರಂಗಭೂಮಿಯ ಸಮಗ್ರ ಪುನಶ್ಚೇತನಕ್ಕೆ ಸಮಾಜ ಬೆಂಬಲ ನೀಡಬೇಕು. ಸುಧೀರ್ಘ ಇತಿಹಾಸವಿರುವ ಜಾಗತಿಕ ರಂಗಭೂಮಿ ವಿಶಾಲವಾಗಿ ಬೆಳೆದಿದ್ದು, ಕನ್ನಡ ರಂಗಭೂಮಿಗೆ ಹೊಸ ಮುಖಗಳ ಪರಿಚಯ ಸಂಭ್ರಮದಿಂದ ನಡೆಯಬೇಕು ಎಮದು ತಿಳಿಸಿದರು.

     ಕಲಾವಿದ, ಸವಾಕ್ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಬೇಕಲ್ ರಂಗಭೂಮಿ ದಿನಾಚರಣೆಯ ಸಂದೇಶ ವಾಚಿಸಿದರು. ನರಸಿಂಹ ಬಲ್ಲಾಳ್, ಉದಯಕುಮಾರ್ ಕಲ್ಲೂರಾಯ, ಶಶಿಧರ ಎದುರ್ತೋಡು, ಮಾಧವ ಉದ್ಯಾವರ, ಸಂಧ್ಯಾ ಮಾಧವ, ಅಂಕಿತ, ಭಾರತೀ ಬಾಬು ಕಾಸರಗೋಡು, ಜಯಶ್ರೀ, ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. 

      ಈ ಸಂದರ್ಭ ಹಿರಿಯ ರಂಗ ಕಲಾವಿದರುಗಳಾದ ಜಯಶ್ರೀ ಹಾಗೂ ಪ್ರಸನ್ನ ಅವರನ್ನು ಗೌರವಿಸಲಾಯಿತು. ನರೇಂದ್ರ ಪಿಲಿಕುಂಜೆ ಸ್ವಾಗತಿಸಿ, ವಂದಿಸಿದರು. ದಿವಾಕರ ಅಶೋಕನಗರ ಕಾರ್ಯಕ್ರಮ ನಿರೂಪಿಸಿದರು. ರಂಗಗೀತೆಗಳ ಗಾಯನ ನಡೆಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries