ನವದೆಹಲಿ: ಸಿಜೆಐ ಎಸ್.ಎ ಬೋಬ್ಡೆ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾ. ಎನ್.ವಿ. ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಮುಂದಿನ ತಿಂಗಳು ಏ.23 ಕ್ಕೆ ನ್ಯಾ.ಎಸ್ಎ ಬೋಬ್ಡೆ ನಿವೃತ್ತರಾಗಲಿದ್ದು, ಮುಂದಿನ ಸಿಜೆಐ ಯಾರಾಗಬೇಕೆಂಬುದನ್ನು ಶಿಫಾರಸು ಮಾಡುವಂತೆ ಸರ್ಕಾರ ಮನವಿ ಮಾಡಿತ್ತು.
ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಾ.19 ರಂದು ನ್ಯಾ.ಎಸ್ಎ ಬೋಬ್ಡೆಗೆ ಪತ್ರ ಬರೆದು, ಶಿಫಾರಸನ್ನು ಕೇಳಿದ್ದರು. ಹೊಸ ಸಿಜೆಐ ನೇಮಕಕ್ಕೆ ಕಾನೂನು ಸಚಿವರು ಸೂಕ್ತ ಸಮಯದಲ್ಲಿ ಹಾಲಿ ಸಿಜೆಐ ನೇಮಕಕ್ಕೆ ಶಿಫಾರಸು ಕೇಳುವುದು, ಶಿಫಾರಸು ಬಂದ ಬಳಿಕ ಅದನ್ನು ಪ್ರಧಾನಿಗೆ ಕಳಿಸಿ, ಪ್ರಧಾನಿ ರಾಷ್ಟ್ರಪತಿಗಳಿಗೆ ಕಳಿಸುವುದು ಪ್ರಕ್ರಿಯೆಯ ಭಾಗವಾಗಿದೆ.
ನ್ಯಾ. ಎನ್.ವಿ. ರಮಣ ಈಗಿರುವ ನ್ಯಾಯಾಧೀಶರ ಪೈಕಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ಆ.26, 2022 ರವರೆಗೂ ಕರ್ತವ್ಯ ಅವಧಿ ಹೊಂದಿದ್ದಾರೆ.