HEALTH TIPS

ಪಂದಳಂ-ಶಬರಿಮಲೆಯಲ್ಲಿ ಪೋಲೀಸ್ ದೌರ್ಜನ್ಯಗಳ ನೆನಪುಗಳೊಂದಿಗೆ ಅಯ್ಯಪ್ಪ ಭಕ್ತರ ಕುಟುಂಬ ಪುನರ್ಮಿಲನ ಇಂದಿನಿಂದ ರಾಜ್ಯಾದ್ಯಂತ

  

      ಪತ್ತನಂತಿಟ್ಟು: "ಹಿಂದಿನದನ್ನು ಮರೆಯಬೇಡಿ" ಎಂಬ ಸಂದೇಶ ಹೊತ್ತಿರುವ ಪ್ಲೆಕ್ಸ್ ಗಳು ಇದೀಗ ಪಂದಳಂನ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಬರಿಮಲೆ ವಿಷಯವನ್ನು ಜಾರಿಸಿ ಬಿಡುವ ಧಾವಂತದಲ್ಲಿರುವ  ಸಿಪಿಎಂನ ನಿಜವಾದ ಮುಖವನ್ನು ತೋರಿಸಲು ಶಬರಿಮಲೆ ಕ್ರಿಯಾ ಸಮಿತಿಯು ಫ್ಲೆಕ್ಸ್ ಬೋರ್ಡ್‍ಗಳನ್ನು ಸ್ಥಾಪಿಸಿದೆ.

         ಕ್ಷೇತ್ರದ ಉತ್ಸವಗಳ ಹೆಸರಲ್ಲಿ ನಡೆದ ಹಿಂದೂ ಬೇಟೆ ಸ್ಪಷ್ಟವಾಗಿ ವಿವರಿಸುವ ಪ್ಲಕ್ಸ್ ಗಳು ಧಾರ್ಮಿಕ ರಕ್ಷಣೆಗಾಗಿ ಭಕ್ತರೊಂದಿಗಿದ್ದೇವೆ ಎಂಬ ಸಂದೇಶ ನೀಡುತ್ತಿವೆ. ಮರೆಯಬೇಡಿ, ಕ್ಷೇತ್ರದ ಅನುಷ್ಠಾನ, ನಂಬಿಕೆ ರಕ್ಷಣೆಯ ಹೋರಾಟದಲ್ಲಿ ಬಿಜೆಪಿಯೂ ನಮ್ಮೊಂದಿಗೆ ಇತ್ತು. ಕೂದಲನ್ನು ಕಟ್ಟಿ ಪೋಲೀಸ್ ದಾಳಿ ನಡೆಸಿದ ಸುರೇಂದ್ರನ್ ಮತ್ತು ಶಶಿಕಲಾ ಅವರ ಚಿತ್ರಗಳೂ ಬೋರ್ಡ್‍ಗಳಲ್ಲಿವೆ.

       ಶಬರಿಮಲೆ ಧಾರ್ಮಿಕ ಉಲ್ಲಂಘನೆಗೆ ಪ್ರತಿಕ್ರಿಯಿಸಿದ್ದಕ್ಕಾಗಿ ದೂರುಗಳು ದಾಖಲಾಗಿರುವ ಅಯ್ಯಪ್ಪ ಭಕ್ತರ ಕುಟುಂಬಗಳ ಸಭೆ ನಡೆಸಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಶಬರಿಮಲೆ ಕ್ರಿಯಾ ಸಮಿತಿ ಮತ್ತು ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಅಯ್ಯಪ್ಪ ಸಂಘ ಇಂದಿನಿಂದ ಮಾ. 27 ರವರೆಗೆ ಪರ್ಯಟನೆ, ಸಭೆ ನಡೆಸಲಿದೆ.

       ವಿವಿಧ ಜಿಲ್ಲೆಗಳ ಆಯ್ದ ಕೇಂದ್ರಗಳಲ್ಲಿ ಸಭೆ ನಡೆಯಲಿದೆ ಎಂದು ಹಿಂದೂ ಐಕ್ಯವೇದಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇ.ಎಸ್.ಬಿಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

        ಇಂದು ಸಂಜೆ 4 ಗಂಟೆಗೆ ತಿರುವನಂತಪುರನ ಗಾಂಧಿ ಉದ್ಯಾನವನದಲ್ಲಿ ಅಯ್ಯಪ್ಪ ಸಂಗಮದೊಂದಿಗೆ ಸಂಘಗಳು ಪ್ರಾರಂಭವಾಗಲಿವೆ. 21 ರಂದು ಬೆಳಿಗ್ಗೆ 9 ಗಂಟೆಗೆ ಕೊಲ್ಲಂ ಮತ್ತು ಸಂಜೆ 4 ಗಂಟೆಗೆ ಕೊಟ್ಟಾಯಂ. 22 ರಂದು ಬೆಳಿಗ್ಗೆ 10 ಗಂಟೆಗೆ ಇಡುಕ್ಕಿ, 4 ರಂದು ಎರ್ನಾಕುಲಂ, 23 ರಂದು ಬೆಳಿಗ್ಗೆ 9 ಗಂಟೆಗೆ ತ್ರಿಶೂರ್, 24 ರಂದು ಸಂಜೆ 4 ಗಂಟೆಗೆ ಕೋಝಿಕ್ಕೋಡ್, 25 ರಂದು ವಯನಾಡ್, ಬೆಳಿಗ್ಗೆ 10 ಗಂಟೆಗೆ, ಕಣ್ಣೂರು 26 ರಂದು ಬೆಳಿಗ್ಗೆ 10 ಗಂಟೆಗೆ, ಕಾಸರಗೋಡಲ್ಲಿ 26 ರಂದು ಮತ್ತು ಪತ್ತನಂತಿಟ್ಟು ಪಂದಳದಲ್ಲಿ 27 ರಂದು ಇಂತಹ ಸಭೆಗಳು ನಡೆಯಲಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries