ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2020-2021 ನೇ ಸಾಲಿನಲ್ಲಿ ನಿವೃತ್ತಿ ಗೊಳ್ಳುತ್ತಿರುವ ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ವಿ ಹಾಗೂ ಅಧ್ಯಾಪಿಕೆ ರತ್ನಾವತಿ ಎ ಇವರಿಗೆ ವಿದಾಯಕೂಟ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೊಡ್ಲೊಮೊಗರು ವಾಣೀ ವಿಜಯ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕಿ ಅನುಸೂಯ ಟೀಚರ್ ಆಗಮಿಸಿ ಶುಭ ಹಾರೈಸಿದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ, ಸಂಚಾಲಕಿ ರಾಜೇಶ್ವರಿ ಎಸ್ ರಾವ್, ಶಾಲಾ ಮಾತೃಸಂಘದ ಅಧ್ಯಕ್ಷೆ ಕೈರುನ್ನಿಸಾ, ಅಧ್ಯಾಪಕ ಬಾಲಕೃಷ್ಣ ಎಂ, ಮಹಾಬಲೇಶ್ವರ ಭಟ್, ನಾರಾಯಣ ಯು ಹಾಗೂ ಸೌಮ್ಯ ಯು ನಿವೃತ್ತರಿಗೆ ಶುಭ ಹಾರೈಸಿದರು. ಅಧ್ಯಾಪಕ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಅಧ್ಯಾಪಿಕೆ ಪದ್ಮಾವತಿ ಎಂ ವಂದಿಸಿದರು. ಅಧ್ಯಾಪಕ ವಿಘ್ನೇಶ್ ಎಸ್. ನಿರೂಪಿಸಿದರು.