ಕಾಸರಗೋಡು: ಮೂರನೇ ಅವಧಿಗೆ ಸ್ಪರ್ಧಾ ಕಣಕ್ಕೆ ಇಳಿದಿರುವ ಕಂದಾಯ ಸಚಿವ ಇ ಚಂದ್ರಶೇಖರನ್ ವಿರುದ್ಧ ಸಿಪಿಐ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದೆ. ಚಂದ್ರಶೇಖರನ್ ಅವರ ಉಮೇದುವಾರಿಕೆಯನ್ನು ವಿರೋಧಿಸಿ ಸಿಪಿಐ ನಾಯಕ ಬಂಗಳಂ ಕುಂಞÂ್ಞ ಕೃಷ್ಣನ್ ಅವರು ಕಾಞಂಗಾಡ್ ಕ್ಷೇತ್ರದ ಎಲ್ಡಿಎಫ್ ಕನ್ವೀನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಪಿಐ ಜಿಲ್ಲಾ ಕಾರ್ಯದರ್ಶಿ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ. ಏತನ್ಮಧ್ಯೆ, ಅವರು ಗುರುವಾರ ಮಧ್ಯಾಹ್ನ ಕಾಞಂಗಾಡ್ ನಲ್ಲಿ ನಡೆದ ಎಲ್ಡಿಎಫ್ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದ್ದರು.
ಇ ಚಂದ್ರಶೇಖರನ್ ಸ್ಪರ್ಧಿಸುತ್ತಿರುವ ಬಗ್ಗೆ ಶಾಖಾ ಕಾರ್ಯದರ್ಶಿಗಳು ಕೂಡ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಹತ್ತಕ್ಕಿಂತಲೂ ಹೆಚ್ಚು ಶಾಖಾ ಕಾರ್ಯದರ್ಶಿಗಳು ಕ್ಷೇತ್ರದ ಸಮಾವೇಶವನ್ನು ಬಹಿಷ್ಕರಿಸಿರುವರು. ಮತ್ತು ಜಿಲ್ಲಾ ನಾಯಕತ್ವಕ್ಕೆ ತಮ್ಮ ರಾಜೀನಾಮೆಯನ್ನು ತಿಳಿಸಿದ್ದಾರೆ.
ಇ.ಚಂದ್ರಶೇಖರನ್ ತನಗೆ ಮೂರನೇ ಬಾರಿಗೆ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಈ ಹಿಂದೆ ರಾಜ್ಯ ನಾಯಕತ್ವಕ್ಕೆ ಮಾಹಿತಿ ನೀಡಿದ್ದರು. ಆದರೆ ರಾಜ್ಯ ಸಮಿತಿ ಚಂದ್ರಶೇಖರ್ ಅವರೇ ಅಭ್ಯರ್ಥಿಯಾಗಬೇಕೆಂದು ಸೂಚಿಸಿತು. ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಮತ್ತು ಬಂಗಳಂ ಕುಂಞÂ ಕೃಷ್ಣನ್ ಅವರ ಹೆಸರನ್ನು ಜಿಲ್ಲಾ ಸಮಿತಿ ಸೂಚಿಸಿತ್ತು.