ಕಾಸರಗೋಡು: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗಿರುವ ಕಂಟ್ರೋಲ್ ಯೂನಿಟ್ ಗಳು, ಬ್ಯಾಲೆಟ್ ಯೂನಿಟ್ ಗಳು, ವಿವಿಪಾಟ್ ಯಂತ್ರಗಳು ಇತ್ಯಾದಿಗಳ ರಾಂಡಮೈಸೇಷನ್ ಜರುಗಿತು. ಮಂಜೇಶ್ವರ, ಉದುಮಾ,ತ್ರಿಕರಿಪುರ ಕ್ಷೇತ್ರಗಳ ರಾಂಡಮೈಸೇಷನ್ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆಯಿತು. ಕಾಞಂಗಾಡ್, ಕಾಸರಗೋಡು ವಿದಾನಸಭೆಗಳ ರಾಂಡಮೈಸೇಷನ್ ಆಯಾ ಆರ್.ಡಿ.ಒ. ಕಚೇರಿಗಳಲ್ಲಿ ಜರುಗಿತು.
ಮಂಜೇಶ್ವರ ಕ್ಷೇತ್ರದ 336 ಮತಗಟ್ಟೆಗಳಿಗಿರುವ ಕಂಟ್ರೋಲ್ ಯೂನಿಟ್ ಗಳು, ಬಾಲೆಟ್ ಯೂನಿಟ್ ಗಳು, ವಿವಿಪಾಟ್ ಯಂತ್ರಗಳು ಇತ್ಯಾದಿಗಳ ರಾಂಡಮೈಸೇಷನ್ ವೇಳೆ ನಿರೀಕ್ಷಕ ರಂಜನ್ ಕುಮಾರ್ ದಾಸ್, ಮಂಜೇಶ್ವರ ಚುನಾವಣೆ ಅಧಿಕಾರಿ ಎಂ.ಕೆ.ಷಾಜಿ, ಅಭ್ಯರ್ಥಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಿಗೆ ಶೇ. 25ರಿಸರ್ವ್ ಸಹಿತ ತಲಾ 420 ಬಾಲೆಟ್ ಯೂನಿಟ್ ಗಳು, ಕಂಟ್ರೋಲ್ ಯೂನಿಟ್ ಗಳು, ಸೇ 35 ರಿಸರ್ವ್ ಸಹಿತ 454 ವಿವಿಪಾಟ್‍ಗಳು ಚುನಾವಣೆಗಾಗಿ ಸಜ್ಜುಗೊಂಡಿವೆ.
ಕಾಸರಗೋಡು ವಿಧಾನಸಭೆ ಕ್ಷೇತ್ರದ 296 ಮತಗಟ್ಟೆಗಳಿಗಿರುವ ಕಂಟ್ರೋಲ್ ಯೂನಿಟ್ ಗಳು, ಬಾಲೆಟ್ ಯೂನಿಟ್ ಗಳು, ವಿವಿಪಾಟ್ ಯಂತ್ರಗಳು ಇತ್ಯಾದಿಗಳ ರಾಂಡಮೈಸೇಷನ್ ನಡೆಯಿತು. ಶೇ 25 ರಿಸರ್ವ್ ಸಹಿತ ತಲಾ 370 ಬಾಲೆಟ್ ಯೂನಿಟ್ , ಕಂಟ್ರೋಲ್ ಯೂಣಿಟ್ ಗಳು, ಶೆ 35 ರಿಸರ್ವ್ ಸಹಿತ 400 ವಿವಿಪಾಟ್ ಗಳು ಇತ್ಯಾದು ಸಜ್ಜುಗೊಂಡಿವೆ. ಇದೇ ರೀತಿ ಉದುಮ, ಕಾಞಂಗಾಡು ಹಾಗೂ ತೃಕ್ಕರಿಪುರ ವಿಧಾನಸಭಾ ಕ್ಷೇತ್ರಗಳಿಗೂ ಯೂನಿಟ್‍ಗಳನ್ನು ಸಜ್ಜುಗೊಳಿಸಲಾಗಿದೆ.