ತಿರುವನಂತಪುರ: ತನ್ನ 37 ವರ್ಷಗಳ ಸೇವಾವಧಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಂತಹ ವ್ಯಕ್ತಿಯನ್ನು ಹಿಂದೆಂದೂ ನೋಡಿಲ್ಲ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿಸ್ವಾಸ್ ಮೆಹ್ತಾ ಹೇಳಿದ್ದಾರೆ.
ತಮ್ಮ ನಿವೃತ್ತಿಯ ಕಾರಣ ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಬಿಸ್ವಾಸ್ ಮೆಹ್ತಾ ಅವರು ಮುಖ್ಯಮಂತ್ರಿಯನ್ನು ಶ್ಲಾಘಿಸಲು ಪದಗಳು ಅಲಭ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಅವರ ಸಾಮಥ್ರ್ಯ ಮತ್ತು ದೃಢ ನಿರ್ಧಾರಗಳು ಅಪೂರ್ವವಾದುದು ಎಂದು ಹೇಳಿದರು.
ನಾನು ಕಳೆದ ಒಂಬತ್ತು ತಿಂಗಳಲ್ಲಿ 38 ನೇ ಕ್ಯಾಬಿನೆಟ್‍ಗಳಲ್ಲಿದ್ದೇನೆ. ನಾನು ಪಿಣರಾಯಿಯ ಆರನೇ ಮುಖ್ಯ ಕಾರ್ಯದರ್ಶಿ. ನಾನು 216 ನೋಟಿಸ್‍ಗಳನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದೇನೆ. ವಿಶೇಷವೆಂದರೆ ಪಿಣರಾಯಿ ವಿಜಯನ್ ಸ್ವತಃ ಪ್ರತಿ ಟಿಪ್ಪಣಿಗಳನ್ನೂ ಓದುತ್ತಾರೆ. ಅವರು ಎಷ್ಟು ಸಮಯವನ್ನು ಮೀಸಲಿಡುತ್ತಾರೆಂಬುದು ನನಗೆ ಅರ್ಥವಾಗುತ್ತಿಲ್ಲ "ಎಂದು ಬಿಸ್ವಾಸ್ ಮೆಹ್ತಾ ಹೇಳಿದರು.
ಕೇರಳಕ್ಕೆ ಪಿಣರಾಯಿ ವಿಜಯನ್ ಅವರಂತಹ ನಾಯಕರು ಬೇಕು ಮತ್ತು ಅವರ ಸೂಚನೆಯಂತೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂಬುದು ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು. ರಾಜ್ಯದ 47 ನೇ ಮುಖ್ಯ ಕಾರ್ಯದರ್ಶಿಯಾಗಿ ಮೆಹ್ತಾರ ಸ್ಥಾನಕ್ಕೆ ಡಾ. ವಿ.ಪಿ.ಜಾಯ್ ನಿನ್ನೆ ಬೆಳಿಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಂಡರು. ಸರ್ಕಾರದ ನೀತಿಗಳ ಪ್ರಕಾರ ರಾಜ್ಯದ ಪ್ರಗತಿಗೆ ಅಗತ್ಯವಾದ ಕ್ರಮಗಳತ್ತ ಗಮನ ಹರಿಸಲಾಗುವುದು ಎಂದರು.