ತಿರುವನಂತಪುರ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹತ್ತು ಮತ್ತು ಹನ್ನೆರಡನೇ ತರಗತಿಗಳ ಪರೀಕ್ಷೆಗಳ ದಿನಾಂಕಗಳನ್ನು ನವೀಕರಿಸಲಾಗಿದೆ.ಎಸ್.ಎಸ್.ಎಲ್.ಸಿ- ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಯ ದಿನಾಂಕಗಳು ಹೊಸತಾಗಿ ಬದಲಾವಣೆಗೊಂಡಿದೆ.
ಪರಿಷ್ಕøತ ಪರೀಕ್ಷೆಯ ವೇಳಾಪಟ್ಟಿಯ ಪ್ರಕಾರ, ಹತ್ತನೇ ತರಗತಿ ಪರೀಕ್ಷೆಯು ಏಪ್ರಿಲ್ 8 ರಂದು ಆರಂಭಗೊಳ್ಳಲಿದೆ. ಏಪ್ರಿಲ್ 29 ರಂದು ಕೊನೆಗೊಳ್ಳಲಿದೆ. ಹೈಯರ್ ಸೆಕೆಂಡರಿ ಪರೀಕ್ಷೆಗಳು ಏಪ್ರಿಲ್ 8 ರಿಂದ 26 ರವರೆಗೆ, ಪೊಕೇಢಶನಲ್ ಹೈಯರ್ ಸೆಕೆಂಡರಿ ಪರೀಕ್ಷೆ ಏಪ್ರಿಲ್ 9 ರಿಂದ 26 ರವರೆಗೆ ನಡೆಯಲಿವೆ.
ನವೀಕರಿಸಿದ ವೇಳಾಪಟ್ಟಿ ಈ ಕೆಳಗಿನಂತಿದೆ:
ಹತ್ತನೇ ತರಗತಿಗೆ:
ಏಪ್ರಿಲ್ 8 ಗುರುವಾರ - ಮೊದಲ ಭಾಷೆ ಭಾಗ 1 - ಮಧ್ಯಾಹ್ನ 1.40 ರಿಂದ 3.30 ರವರೆಗೆ
ಏಪ್ರಿಲ್ 9 ಶುಕ್ರವಾರ - ಮೂರನೇ ಭಾಷೆ - ಹಿಂದಿ / ಸಾಮಾನ್ಯ ಜ್ಞಾನ - ಮಧ್ಯಾಹ್ನ 2.40 ಕ್ಕೆ ಸಂಜೆ 4.30 ರವರೆಗೆ .
ಏಪ್ರಿಲ್ 12 ಸೋಮವಾರ - ಇಂಗ್ಲಿಷ್ - ಮಧ್ಯಾಹ್ನ 1.40 ರಿಂದ ಸಂಜೆ 4.30 ರವರೆಗೆ
ಏಪ್ರಿಲ್ 15 ಗುರುವಾರ - ಭೌತಶಾಸ್ತ್ರ - ಬೆಳಿಗ್ಗೆ 9.40 ರಿಂದ 11.30 ರವರೆಗೆ
ಏಪ್ರಿಲ್ 19 ಸೋಮವಾರ - ಗಣಿತ - ಬೆಳಿಗ್ಗೆ 9.40 ರಿಂದ ಮಧ್ಯಾಹ್ನ 12.30
ಏಪ್ರಿಲ್ 21 ಬುಧವಾರ - ರಸಾಯನಶಾಸ್ತ್ರ - ಬೆಳಿಗ್ಗೆ 9.40 ರಿಂದ 11.30 ರವರೆಗೆ
ಏಪ್ರಿಲ್ 27 ಮಂಗಳವಾರ - ಸಮಾಜ ವಿಜ್ಞಾನ - ಬೆಳಿಗ್ಗೆ 9.40 ರಿಂದ ಮಧ್ಯಾಹ್ನ 12.30
ಏಪ್ರಿಲ್ 28 ಬುಧವಾರ - ಜೀವಶಾಸ್ತ್ರ - ಬೆಳಿಗ್ಗೆ 9.40 ರಿಂದ 11.30 ರವರೆಗೆ
ಏಪ್ರಿಲ್ 29, ಗುರುವಾರ - ಮೊದಲ ಭಾಷೆ ಭಾಗ ಎರಡು - ಬೆಳಿಗ್ಗೆ 9.40 ರಿಂದ 11.30 ರವರೆಗೆ