ಮುಳ್ಳೇರಿಯ: ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಮುಳಿಯಾರು ಶಾಖೆ `ಸ್ಕಂದ ನಿನಾದ'ದ ವಾರ್ಷಿಕೋತ್ಸವವು ಶಿವರಾತ್ರಿ ದಿನದಂದು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು.
ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ದೀಪಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೀತ ಗುರುಗಳಾದ ಉಷಾ ಈಶ್ವರ ಭಟ್, ಕ್ಷೇತ್ರದ ಪ್ರಧಾನ ಅರ್ಚಕ ಅನಂತಪದ್ಮನಾಭ ಮಯ್ಯ, ಜೊತೆಗಿದ್ದರು. ನಂತರ ವಿದ್ಯಾರ್ಥಿಗಳು ಸಂಗೀತ ಕಲಾ ಸೇವೆ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಗೋವಿಂದ ಪ್ರಸಾದ್ ಪಯ್ಯನ್ನೂರು, ಪ್ರಭಾಕರ ಕುಂಜಾರು, ಬಾಲರಾಜ್ ಬೆದ್ರಡಿ, ಈಶ್ವರ ಭಟ್, ರಾಜೀವ್ ವೆಳ್ಳಿಕೋತ್ ಸಹಕರಿಸಿದರು. ಕೊನೆಯಲ್ಲಿ ಶ್ರೀ ದೇವರ ಸನ್ನಿಯಲ್ಲಿ ಸಂಗೀತ ಸೇವೆ ನಡೆಯಿತು. ನಿವೃತ್ತ ಅಧ್ಯಾಪಕ ಗೋವಿಂದ ಭಟ್ ಬಳ್ಳಮೂಲೆ ಸ್ವಾಗತಿಸಿ, ರಾಘವನ್ ಬೆಳ್ಳಿಪ್ಪಾಡಿ ವಂದಿಸಿದರು.