ಕೊಚ್ಚಿ: ಕೆ ಸತ್ಯನಾರಾಯಣ ರಾಜು ಅವರನ್ನು 2021 ರ ಮಾರ್ಚ್ 10 ರಂದು ಅನ್ವಯವಾಗುವಂತೆ ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಅವರು 1988 ರಲ್ಲಿ ವಿಜಯಾ ಬ್ಯಾಂಕ್‍ಗೆ ಸೇರ್ಪಡೆಗೊಂಡಿದ್ದರು.ಬಳಿಕ ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದರು.
33 ವರ್ಷಗಳ ಸುದೀರ್ಘ ಬ್ಯಾಂಕಿಂಗ್ ವೃತ್ತಿಜೀವನದಲ್ಲಿ, ಅವರು 12 ವರ್ಷಗಳ ಕಾಲ ವಿಶೇಷ ಕಾಪೆರ್Çರೇಟ್ ಬ್ಯಾಂಕಿಂಗ್ ಶಾಖೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರಾಗಿದ್ದರು. ಅವರು ಶಿವಮೊಗ್ಗ, ವಿಜಯವಾಡ, ಹೈದರಾಬಾದ್ ಮತ್ತು ಮುಂಬೈನ ಪ್ರಾದೇಶಿಕ ಮುಖ್ಯಸ್ಥರಾಗಿದ್ದರು.
ಬ್ಯಾಂಕ್ ಆಫ್ ಬರೋಡಾದ ಅಂಗಸಂಸ್ಥೆಯಾದ ಬಾಬ್ ಫೈನಾನ್ಷಿಯಲ್ ಸೊಲ್ಯೂಷನ್ಸ್ ಲಿಮಿಟೆಡ್‍ನ ನಿರ್ದೇಶಕರಾಗಿದ್ದಾರೆ. ಬಾಬ್-ಐಐಟಿ ಬಾಂಬೆ ಇನ್ನೋವೇಶನ್ ಸೆಂಟರ್‍ನ ಸ್ಟೀರಿಂಗ್ ಸಮಿತಿಯ ಸದಸ್ಯರಾಗಿದ್ದಾರೆ.