ತಿರುವನಂತಪುರ: ಕೇಂದ್ರ ಹವಾಮಾನ ಇಲಾಖೆಯು ಸೋಮವಾರದವರೆಗೆ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಾರ್ಚ್ 29 ರವರೆಗೆ ರಾಜ್ಯದಲ್ಲಿ ಪ್ರತ್ಯೇಕ ಮಳೆಯಾಗುವ ನಿರೀಕ್ಷೆಯಿದೆ. ಜನರು ಜಾಗರೂಕರಾಗಿರಿ ಎಂದು ಸಲಹೆ ನೀಡಿದೆ. ಗುರುವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗಿತ್ತು. ಎರ್ನಾಕುಳಂನಲ್ಲಿ ತೀವ್ರ ಗಾಳಿ ಮತ್ತು ಮಳೆಯಿಂದಾಗಿ ವ್ಯಾಪಕ ಹಾನಿಯಾಗಿದೆ.
ಏತನ್ಮಧ್ಯೆ, ಪಾಲಕ್ಕಾಡ್ನಲ್ಲಿ ಬಿಸಿಲಿನ ಧಗೆ ಹೆಚ್ಚಿರುವುದು ಕಂಡುಬಂದಿದೆ. ಮುಂಡೂರು ಐಆರ್‍ಟಿಸಿ 41 ಡಿಗ್ರಿ ಸೆಲ್ಸಿಯಸ್ ಉಷ್ಣತಾಮಾನ ದಾಖಲಿಸಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಹೊರ ತೆರಳಲು ಅಸಾಧ್ಯವಾದ ಸ್ಥಿತಿ ಇತ್ತೆಂದು ತಿಳಿದುಬಂದಿದೆ. ತೀವ್ರ ಉಷ್ಣತೆಯ ಕಾರಣ ಮನೆಯೊಳಗೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಿಸಿಲಿಗೆ ಮೈಯೊಡ್ಡುವುದನ್ನು ನಿಯಂತ್ರಿಉಸಲು ಸೂಚನೆ ನೀಡಲಾಗಿದೆ. ಮತ್ತು ಸಾಕಷ್ಟು ನೀರು ಕುಡಿಯಲು ನಿರ್ದೇಶಿಸಲಾಗಿದೆ. ರಾಜಕೀಯ ಪಕ್ಷಗಳು ಶಾಖಕ್ಕೆ ಅನುಗುಣವಾಗಿ ಪ್ರಚಾರ ಮಾಡಬೇಕು. ಮನೆಯೊಳಗಿನ ಉಷ್ಣತೆಯು ಹೀಟ್ ಸ್ಟ್ರೋಕ್‍ಗೆ ಕಾರಣವಾಗಬಹುದು. ಆದ್ದರಿಂದ, ಕಿಟಕಿ ಮತ್ತು ಬಾಗಿಲನ್ನು ತೆರೆದಿಡಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.