ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಪ್ರಕರಣಗಳನ್ನು ಇತ್ಯರ್ಥಪಡಿಸುವ ಒಪ್ಪಂದಕ್ಕೆ ಸಿಪಿಐ (ಎಂ)- ಬಿಜೆಪಿ ಒಪ್ಪಂದ ಮಾಡಿಕೊಂಡಿದೆ ಎಂದು ಕುಂಬಳೆಯಲ್ಲಿ ಮುಸ್ಲಿಂ ಯೂತ್‍ಲೀಗ್ ಜಿಲ್ಲಾ ಖಜಾಂಜಿ ಯೂಸುಫ್ ಉಳುವಾರು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಹೈಕೋರ್ಟ್ ನಲ್ಲಿ ಬಾಕಿ ಇರುವ ಎರಡು ಪ್ರಕರಣಗಳಲ್ಲಿ ಎರಡೂ ಪಕ್ಷಗಳು ಪರಸ್ಪರ ಒಪ್ಪಂದಕ್ಕೆ ಬಂದಿದೆ. ಎರಡೂ ಗುಂಪುಗಳು ವಾರ್ಷಿಕವಾಗಿ ನಡೆಸುವ ಹುತಾತ್ಮ ದಿನಾಚರಣೆಯು ಹುತಾತ್ಮರ ಹೆಸರಿನಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ಪಕ್ಷದ ವರ್ಚಸ್ಸನ್ನು ಕಾಯ್ದುಕೊಳ್ಳಲು ಆಚರಿಸುತ್ತವೆ. ಪ್ರಕರಣಗಳ ಪ್ರಸ್ತುತ ಕಾನೂನು ಹೋರಾಟದ ಸ್ಥಿತಿಗತಿಯನ್ನು ವಿಚಾರಿಸಲು ಹುತಾತ್ಮರ ಕುಟುಂಬಗಳು ಸಿದ್ಧರಾಗಬೇಕು ಎಂದು ಯೂಸುಫ್ ಒತ್ತಾಯಿಸಿದರು. ಸಿಪಿಎಂ-ಬಿಜೆಪಿ ಘರ್ಷಣೆಗಳು ಮತ್ತು ಹತ್ಯೆಗಳು ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿವೆ ಮತ್ತು ಪರಸ್ಪರ ಕಚ್ಚಾಡುತ್ತಿವೆ.ಇಂತಹ ಸ್ಥಿತಿಯಲ್ಲಿ ಕುಂಬಳೆಲ್ಲಿಯೇ ಇಂತಹ ಪರಸ್ಪರ ಹೊಂದಾಣಿಕೆ ಆಶ್ಚರ್ಯಕರವಾಗಿದೆ. ಇದಕ್ಕೂ ಮೊದಲು ಭಾಸ್ಕರ ಕುಂಬಳೆ ಹತ್ಯೆಯ ಆರೋಪಿಗಳ ಮನೆಯಲ್ಲಿ ಕುಂಬಳೆ ಪಂಚಾಯತಿ ಸ್ಥಾಯಿ ಸಮಿತಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ನಡೆದವು. ಆ ಬಳಿಕ ಅದೇ ವ್ಯಕ್ತಿಯ ಮನೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಒಪ್ಪಂದಕ್ಕೆ ಬರಲಾಯಿತು. ಸಿಪಿಎಂ ಪ್ರದೇಶ ಕಾರ್ಯದರ್ಶಿ ಸಿ.ಎ ಜುಬೇರ್ ಮತ್ತು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಅವರು ಎರಡು ಒಪ್ಪಂದದ ಮಾತುಕತೆಯ ನೇತೃತ್ವ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯಿತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬಿಜೆಪಿ-ಸಿಪಿಎಂ ಕೋರ್ ಸಮಿತಿ ಮಾಸಿಕ ರಹಸ್ಯ ನೆಲೆಯಲ್ಲಿ ಸಭೆ ಸೇರುತ್ತದೆ ಎಂದು ಯೂಸುಫ್ ಉಳುವಾರ್ ಆರೋಪಿಸಿದ್ದಾರೆ. ಸಿಪಿಎಂ-ಬಿಜೆಪಿ ನಡೆ ಕುಂಬಳೆ ಕ್ಷೇತ್ರದಾದ್ಯಂತ ಒಮ್ಮತವನ್ನು ಪುಷ್ಠೀಕರಿಸುವುದು ಮತ್ತು ವಿಧಾನಸಭಾ ಚುನಾವಣೆಯಲ್ಲೂ ಮತಗಳನ್ನು ವ್ಯಾಪಾರ ಮಾಡುವ ಮೂಲಕ ಪರಸ್ಪರ ಸಹಾಯ ಮಾಡುವುದು ಎಂದು ಯೂಸುಫ್ ಉಳುವಾರ್ ಹೇಳಿದರು.