ಬದಿಯಡ್ಕ: ಪೆರಡಾಲ ಶ್ರೀಉದನೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹಾ ಶಿವರಾತ್ರಿ ಮಹೋತ್ಸವ ಮಾ.11 ಹಾಗೂ 12 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.11 ರಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, 7.30 ರಿಂದ ಬೆಳಗಿನ ಪೂಜೆ, 8.30ಕ್ಕೆ ಶತರುದ್ರಾಭಿಷೇಕ, ಮಧ್ಯಾಹ್ನ 12 ಕ್ಕೆ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ದೀಪಾರಾಧನೆ, 6.45 ರಿಂದ ನೀಲೇಶ್ವರದ ಗಂಗಾಧರ ಮಾರಾರ್ ಮತ್ತು ತಂಡದವರಿಂದ ತಾಯಂಬಕ, ರಾತ್ರಿ 7 ರಿಂದ ಶ್ರೀದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ನಡೆಯಲಿದೆ.ಅಲ್ಲದೆ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ವಿವಿಧ ಭಜನಾ ತಂಡಗಳಿಂದ ಏಕಾಹ ಭಜನಾ ಸಂಕೀರ್ತನೆ ನಡೆಯಲಿದೆ.
ಮಾ.12 ರಂದು ಬೆಳಿಗ್ಗೆ 7.30ಕ್ಕೆ ಬೆಳಗಿನ ಪೂಜೆ, 10 ರಿಂದ ಶ್ರೀದೇವರ ಬಲಿ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ 12 ರಿಂದ ಶ್ರೀಪಿಲಿಚಾಮುಂಡಿ ದೈವದ ಕೋಲ, ಅರಸಿನ ಹುಡಿ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.