ಕಾಸರಗೋಡು: ಸಮಯಕ್ಕೆ ತಕ್ಕಂತೆ ಪೆÇಲೀಸ್ ಠಾಣೆಗಳು ಮತ್ತು ಪೋಲೀಸರು ಬದಲಾಗುತ್ತಿರುವುದು ತೀರ ಇತ್ತೀಚಿನ ಬೆಳವಣಿಗೆ. ಅತೀ ಹಳೆಯ ಕಟ್ಟಡದಲ್ಲಿ ಕಾರ್ಯವೆಸಗುತ್ತಿದ್ದ ಚಂದೇರ ಪೋಲೀಸ್ ಠಾಣೆ ಕೊನೆಗೂ ನವೀಕರಣಗೊಂಡ ಕಟ್ಟಡ ಆಕರ್ಷಣೀಯವಾಗಿ ಸಜ್ಜುಗೊಂಡಿದೆ. ಠಾಣೆಯ ನವೀಕರಣದೊಂದಿಗೆ, ಕಟ್ಟಡವು ಸ್ಟಾರ್ ಹೋಟೆಲ್‍ನಂತೆಯೇ ಈಗ ಬದಲಾಗಿದೆ.
ಚಂದೇರ ಠಾಣೆಯ ಕಟ್ಟಡದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಿಗದಿಪಡಿಸಿದ 10 ಲಕ್ಷ ರೂ.ಗಳ ಸಹಾಯದಿಂದ ಮತ್ತು ಠಾಣಾ ವ್ಯಾಪ್ತಿಯ ಸಹಕಾರಿ ಸಂಘಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಾಯದಿಂದ ಚಂದೇರಾ ಪೋಲೀಸ್ ಠಾಣೆ ನವೀಕರಿಸಲಾಗಿದೆ. ಸ್ಟೇಷನ್ ಇನ್ಸ್‍ಪೆಕ್ಟರ್ ಮತ್ತು ಸಬ್ ಇನ್ಸ್‍ಪೆಕ್ಟರ್‍ಗಾಗಿ ಪ್ರತ್ಯೇಕ ಕೊಠಡಿಗಳು ಐಷಾರಾಮಿ ಹೋಟೆಲ್‍ನಲ್ಲಿರುವ ಕೋಣೆಗಳಂತೆಯೇ ರೂಪಿಸಲಾಗಿದೆ. ದೂರುದಾರರು ಕುಳಿತು ವಿಶ್ರಾಂತಿ ಪಡೆಯಬಹುದು, ಹಳೆಯ ಬೆಂಚುಗಳು ಅಥವಾ ಕುರ್ಚಿಗಳು ಇಲ್ಲಿ ಇನ್ನು ಕಾಣ ಸಿಗದು. ಬದಲಿಗೆ ಮೆತ್ತನೆಯ ಆಸನಗಳನ್ನು ಅಳವಡಿಸಲಾಗಿದೆ.
ಪೋಲೀಸ್ ಅಧಿಕಾರಿಗಳಿಗೆ ವಿಶೇಷ ಸಭಾಂಗಣಗಳು ಮತ್ತು ಕುಳಿತುಕೊಳ್ಳಲು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಜೊತೆಗೆ ಮಕ್ಕಳ ಚಿಕಿತ್ಸಾಲಯವೂ ಇದೆ. ತ್ರಿಕ್ಕರಿಪುರ ರೋಟರಿ ಕ್ಲಬ್‍ನ ಸಹಾಯದಿಂದ ಠಾಣೆಯ ಮುಂದೆ ಗಾಂಧಿಯ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಚಂದೇರಾ ಪೋಲೀಸ್ ಠಾಣೆ ಜನಮೈತ್ರಿ ಚಟುವಟಿಕೆಗಳಿಂದಾಗಿ ರಾಜ್ಯವ್ಯಾಪಿ ಗಮನ ಸೆಳೆದಿದೆ. ಚಂದೇರಾ ಪೋಲೀಸ್ ಠಾಣೆ ಸ್ವಾತಂತ್ರ್ಯ ಪೂರ್ವರದಲ್ಲಿ 1937 ರಲ್ಲಿ ಬ್ರಿಟಿಷರು ಸ್ಥಾಪಿಸಿದ್ದರು. ಸ್ವಾತಂತ್ರ್ಯದ ನಂತರ ಕೇರಳದ ಎಲ್ಲಾ ಪೋಲೀಸ್ ಠಾಣೆಗಳು ಬದಲಾಗಲು ಬಹಳಷ್ಟು ಕಾಲಗಳನ್ನು ಸವೆಸಬೇಕಾಯಿತು. ಈ ಪೈಕಿ ಗಡಿನಾಡು ಕಾಸರಗೋಡಿನ ದಕ್ಷಿಣದ ತುದಿಯಲ್ಲಿರುವ ಚಂದೇರ ಠಾಣೆಯಂತೂ ಇದೀಗಷ್ಟೇ ಪುನರುತ್ಥಾನಗೊಂಡಿದೆ.
ಚಂದೇರಾ ಠಾಣೆಯಲ್ಲಿ ಪೋಲೀಸ್ ವ್ಯವಸ್ಥೆಯ ವಿಶೇಷ ಯೋಜನೆಗಳಾದ ತಾಲೋಲಂ, ಅಮ್ಮಕೂಟು, ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ಮತ್ತು ಟ್ರಾಮಾಕೇರ್ ತರಬೇತಿಯನ್ನು ಜನರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ರಕ್ತದಾನ ಶಿಬಿರಗಳು, ಕಲಿಕಾ ನ್ಯೂನತೆ ಇರುವ ಮಕ್ಕಳಿಗಾಗಿ ಸ್ವಯಂಪ್ರೇರಿತ ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರಗಳು, ಜೆರಿಯಾಟ್ರಿಕ್ ಕೇಂದ್ರಗಳಲ್ಲಿ ಆರೋಗ್ಯ ಶಿಬಿರಗಳು ಮತ್ತು ಠಾಣಾ ಆವರಣದಲ್ಲಿ ಐದು ಮರಗಳನ್ನು ಕಡಿಯುವ ಬದಲು 50 ಸಸಿಗಳನ್ನು ನೆಡುವುದು ಸೇರಿದಂತೆ ಚಂದೇರಾ ಪೋಲೀಸರ ಚಟುವಟಿಕೆಗಳು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ.