HEALTH TIPS

ಕೊರೊನಾ ಲಸಿಕೆ ರಫ್ತಿನ ಮೇಲೆ ಕೇಂದ್ರ ಸರ್ಕಾರ ಯಾವ ನಿರ್ಬಂಧವನ್ನೂ ಹೇರಿಲ್ಲ

             ನವದೆಹಲಿ : ಕೊರೊನಾ ಲಸಿಕೆ ರಫ್ತಿನ ಮೇಲೆ ಕೇಂದ್ರ ಸರ್ಕಾರವು ಯಾವುದೇ ನಿರ್ಬಂಧ ಹೇರಿಲ್ಲ, ಎಂದಿನಂತೆ ಮಿತ್ರ ರಾಷ್ಟ್ರಗಳಿಗೆ ಲಸಿಕೆ ರಫ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.


         ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇತರೆ ಹಲವು ದೇಶಗಳಿಗಿಂತ ಭಿನ್ನವಾಗಿ ಭಾರತವು ಕೋವಿಡ್-19 ಲಸಿಕೆಗಳ ರಫ್ತಿಗೆ ಯಾವುದೇ ನಿಷೇಧವನ್ನು ವಿಧಿಸಿಲ್ಲ ಮತ್ತು ಹಂತ ಹಂತವಾಗಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ. ದೇಶೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಪಾಲುದಾರ ರಾಷ್ಟ್ರಗಳಿಗೆ ಲಸಿಕೆಗಳನ್ನು ಹಂತ-ಹಂತವಾಗಿ ಪೂರೈಸುವ ಬಗ್ಗೆ ಭಾರತ ತನ್ನ ನಿಲುವು ಪ್ರಕಟಿಸಿದೆ.

        ಈ ಹಿಂದೆ ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ವಿದೇಶಕ್ಕೆ ರಫ್ತಾಗುತ್ತಿರುವ ಕೋವಿಡ್-19 ಲಸಿಕೆಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು.

        ಇದೀಗ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಕೋವಿಡ್-19 ಲಸಿಕೆಗಳ ರಫ್ತಿನ ಮೇಲೆ ನಿರ್ಬಂಧ ಹೇರಿಲ್ಲ.. ಮಿತ್ರ ರಾಷ್ಟ್ರಗಳಿಗೆ ಎಂದಿನಂತೆ ಲಸಿಕೆ ರಫ್ತಾಗುತ್ತದೆ ಎಂದು ಹೇಳಿದೆ.

ದೇಶೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಕೋವಿಡ್ ಲಸಿಕೆಗಳನ್ನು ಸರಬರಾಜು ಮಾಡುತ್ತಿದೆ. ಭಾರತವು ಮುಂದಿನ ಕೆಲತಿಂಗಳಲ್ಲಿ ತನ್ನ ಪಾಲುದಾರ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆಗಳನ್ನು ಹಂತಹಂತವಾಗಿ ಪೂರೈಸುತ್ತಲೇ ಇರುತ್ತದೆ.

       ಲಸಿಕೆ ವಿಚಾರವಾಗಿ ತನ್ನ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಮಿತ್ರರಾಷ್ಟ್ರಗಳಿಗೆ ನಿಗದಿಯಂತೆ ಲಸಿಕೆ ಪೂರೈಕೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ.

     ಭಾರತವು ದೇಶೀಯ ಕೋವಿಡ್ -19 ಲಸಿಕೆ ವಿತರಣಾ ಕಾರ್ಯಕ್ರಮವನ್ನು ಜನವರಿ 16 ರಂದು ಪ್ರಾರಂಭಿಸಿತ್ತು ಮತ್ತು ದೇಶದಲ್ಲಿ ಲಸಿಕೆ ವಿತರಣೆ ಆರಂಭವಾದ ಕೆಲವೇ ದಿನಗಳಲ್ಲಿ ವಿದೇಶಗಳಿಗೂ ಭಾರತ ಲಸಿಕೆಯ ರಫ್ತು ಪ್ರಾರಂಭಿಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries