ತಿರುವನಂತಪುರ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಸಿಪಿಎಂ ಅಭ್ಯರ್ಥಿಗಳ ಪಟ್ಟಿಗಳನ್ನು ಹೊರತಂದಿದೆ. ತರೂರಿನಿಂದ ಸಚಿವ ಎ.ಕೆ.ಬಾಲನ್ ಅವರ ಪತ್ನಿ ಡಾ. ಪಿ.ಕೆ.ಜಮೀಲಾ ಮತ್ತು ಇರಿಂಞಲಕುಡದಿಂದ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಅವರ ಪತ್ನಿ ಡಾ.ಬಿಂದು ಸ್ಪರ್ಧಿಸುವರು.
ಸಿಪಿಎಂನ ತೀರ್ಮಾನದಂತೆ ಮಂತ್ರಿಗಳು ಮತ್ತು ಈಗಿರುವ ಶಾಸಕರಿಗೆ ಎರಡು ಅವಧಿಗಿಂತ ಹೆಚ್ಚು ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ತಿಳಿಸಲಾಗಿದೆ. ಮಂತ್ರಿಗಳಾದ ಥಾಮಸ್ ಐಸಾಕ್, ಜಿ. ಸುಧಾಕರನ್, ಸಿ. ರವೀಂದ್ರನಾಥ್, ಎ.ಕೆ.ಬಾಲನ್ ಮತ್ತು ಇ.ಪಿ.ಜಯರಾಜನ್ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿಲ್ಲ.
ಬೆಂಬಲಿತ ಪಕ್ಷಕ್ಕೆ ಸ್ಥಾನ ನೀಡಬೇಕಾಗಿರುವುದರಿಂದ ಸಿ.ಕೆ.ಶಶೀಂದ್ರನ್ ಶಾಸಕರು ಸ್ಪರ್ಧಿಸುವುದಿಲ್ಲ. ಬೇಪೂರ್ ಶಾಸಕ ವಿಕೆಸಿ ಮಮ್ಮದ್ ಕೋಯಾ ಮತ್ತು ಇರಿಂಞಲಕುಡ ಶಾಸಕ ಕೆ.ಯು.ಅರುಣನ್ ಅವರು ಎರಡು ಅವಧಿಗಳನ್ನು ಪೂರ್ಣಗೊಳಿಸಿರುವುದರಿಂದ ಈ ಬಾರಿ ಸ್ಪರ್ಧಿಸುವುದಿಲ್ಲ. ಶೋರ್ನೂರ್ ಶಾಸಕ ಪಿ.ಕೆ.ಶಾಜಿ ಕೂಡ ಕಣದಲ್ಲಿಲ್ಲ.
ರಾಣ್ಣಿ ಮತ್ತು ಕುಟ್ಟಿಯಡಿ ಕ್ಷೇತ್ರಗಳನ್ನು ಕೇರಳ ಕಾಂಗ್ರೆಸ್ ಶಾಸಕರಿಗೆ ನೀಡಲಾಯಿತು. ಗುರುವಾಯೂರ್, ಪಿರಪೋಮ್, ಕೊಯಿಲಾಂಡಿ, ತಿರುವಂಬಾಡಿ ಮತ್ತು ಪಾಲಕ್ಕಾಡ್ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಬೇಬಿ ಜಾನ್ ಗುರುವಾಯೂರ್‍ನಲ್ಲಿ ಸ್ಪಧೀಸುವರೆನ್ನಲಾಗಿದೆ. ಕೊಯಿಲಾಂಡಿ ಕನಂನಲ್ಲಿ ಜಮೀಲಾ ಅಥವಾ ಸತಿದೇವಿ ಅಭ್ಯರ್ಥಿಗಳಾಗಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ನಾಳೆ ನಿರ್ಧಾರ ತೆಗೆದುಕೊಳ್ಳಲಿದೆ. ತಿರುವಂಬಾಡಿಯಲ್ಲಿ ಲಿಂಟೋ ಜೋಸೆಫ್ ಅಥವಾ ಗಿರೀಶ್ ಜಾನ್ ಸ್ಪರ್ಧಿಸಲಿದ್ದಾರೆ.
ಬಿಡುಗಡೆಗೊಂಡ ಅಭ್ಯರ್ಥಿಗಳ ಪಟ್ಟಿ :
ತಿರುವನಂತಪುರಂ ಜಿಲ್ಲೆ
ಪಾರಶಾಲ - ಸಿ.ಕೆ.ಹರೀಂದ್ರನ್
ನಯ್ಯಾಟಿಂಗರ - ಕೆ ಅನ್ಸಾಲನ್
ವಟ್ಟಿಯೂರ್ಕಾವ್ - ವಿ.ಕೆ.ಪ್ರಶಾಂತ್
ಕಟ್ಟಕಡ - ಐ.ಬಿ.ಸತೀಶ್
ಬೇವು - ವಿ.ಶಿವಂಕುಟ್ಟಿ
ಕಝಿಕೂಟಂ - ಕಡಕಂಪಲ್ಲಿ ಸುರೇಂದ್ರನ್
ವರ್ಕಲಾ - ವಿ. ಸಂತೋಷ
ವಾಮನಪುರಂ - ಡಿ.ಕೆ.ಮುರಳಿ
ಅಟ್ಟಿಂಗಲ್ - ಓಎಸ್ ಅಂಬಿಕಾ
ಅರುವಿಕ್ಕರ - ಜಿ. ಸ್ಟೀಫನ್
ಕೊಲ್ಲಂ ಜಿಲ್ಲೆ
ಕೊಲ್ಲಂ- ಎಂ ಮುಖೇಶ್
ಎರಾವಿಪುರಂ - ಎಂ ನೌಶಾದ್
ಚವರ - ಡಾ.ಸುಜಿತ್ ವಿಜಯನ್
ಕುಂದರ - ಜೆ.ಮೆರ್ಸಿಕುಟ್ಟಿಯಮ್ಮ
ಕೊಟ್ಟಾರಕರ - ಕೆ.ಎನ್.ಬಾಲಗೋಪಾಲ್
ಪಥನಮತ್ತಟ್ಟ ಜಿಲ್ಲೆ
ಅರಣ್ಮುಲಾ- ವೀಣಾ ಜಾರ್ಜ್
ಕೊನ್ನಿ - ಕೆಯು ಜನೀಶ್ ಕುಮಾರ್
ಆಲಪ್ಪುಳ ಜಿಲ್ಲೆ
ಆಲಪ್ಪುಳ- ಪಿ.ಪಿ.ಚಿತ್ತಾರಂಜನ್
ಚೆಂಗಣ್ಣೂರು- ಸಾಜಿ ಚೆರಿಯನ್
ಕಾಯಂಕುಲಂ - ಯು.ಪ್ರತಿಭ
ಅಂಬಲಪುಳ- ಎಚ್.ಸಲಾಮ್
ಅರೂರ್ - ದಲೀಮಾ ಜೊಜೊ
ಮಾವೆಲಿಕಾರ - ಎಂ.ಎಸ್.ಅರುಣ್ ಕುಮಾರ್
ಕೊಟ್ಟಾಯಂ ಜಿಲ್ಲೆ
ಕೊಟ್ಟಾಯಂ - ಕೆ.ಅನಿಲ್ ಕುಮಾರ್
ಏಟ್ಟಮನೂರ್ - ವಿ.ಎನ್.ವಾಸವನ್
ಪುತ್ತುಪಲ್ಲಿ - ಜೇಕ್ ಸಿ ಥಾಮಸ್
ಇಡುಕ್ಕಿ ಜಿಲ್ಲೆ
ಉಡುಂಬಂಚೋಳ - ಎಂಎಂ ಮಣಿ
ದೇವಿಕುಳಂ- ಎ.ರಾಜಾ
ಎರ್ನಾಕುಳಂ ಜಿಲ್ಲೆ
ಕೊಚ್ಚಿ - ಕೆ.ಜೆ. ಮ್ಯಾಕ್ಸಿ
ವಿಪಿನ್ - ಕೆ.ಎನ್ ಉನ್ನಿಕೃಷ್ಣನ್
ತ್ರಿಕ್ಕರ - ಜೆ. ಜಾಕೋಬ್
ತ್ರಿಪುನಿತ್ತುರಾ - ಎಂ. ಸ್ವರಾಜ್
ಕಲಾಮಸ್ಸೆರಿ - ಪಿ ರಾಜೀವ್
ಕೋಥಮಂಗಳಂ - ಆಂತೋನಿ ಜಾನ್
ತ್ರಿಶೂರ್ ಜಿಲ್ಲೆ
ಚಾಲಕುಡಿ - ಯುಪಿ ಜೋಸೆಫ್
ಇರಿಂಞಲಕುಡ - ಆರ್.ಬಿಂದು
ವಡಕ್ಕಂಚೇರಿ- ಜೇವಿಯರ್ ಚಿಟ್ಟಿಲಪ್ಪಳ್ಳಿ
ಮಣಲೂರು - ಮುರಳಿ ಪೆರುನೆಲ್ಲಿ
ಚೇಲಕ್ಕರ - ಯು.ಆರ್.ಪ್ರದೀಪ್
ಪುದುಕ್ಕಾಡ್ - ಕೆ.ಕೆ. ರಾಮಚಂದ್ರನ್
ಕುನ್ನಂಕುಳಂ - ಎಸಿ ಮೊಯ್ದೀನ್
ಇರಿಂಞಲಕುಡ - ಆರ್ ಬಿಂದು
ಕಣ್ಣೂರು ಜಿಲ್ಲೆ
ಧರ್ಮಡಂ - ಪಿಣರಾಯಿ ವಿಜಯನ್
ಪಯ್ಯನ್ನೂರು - ಪಿಐ ಮಧುಸೂಧನನ್
ಕಲ್ಯಾಸ್ಸೆರಿ - ಎಂ ವಿಜಿನ್
ಅಜಿಕೋಡ್ - ಕೆ.ವಿ.ಸುಮೇಶ್
ಮಟ್ಟಣ್ಣೂರು - ಕೆ.ಕೆ.ಶೈಲಜಾ
ತಲಶೇರಿ - ಎ.ಎನ್.ಶಂಸಿರ್
ತಳಿಪರಂಬ - ಎಂ.ವಿ.ಗೋವಿಂದನ್
ಕೋಝಿಕೋಡ್ ಜಿಲ್ಲೆ
ಪೆರಾಂಬ್ರಾ - ಟಿಪಿ ರಾಮಕೃಷ್ಣನ್
ಬಲೂಸೆರಿ - ಸಚಿನ್ ದೇವ್
ಕೋಝಿಕೋಡ್ ಉತ್ತರ - ತೊಟ್ಟತಿಲ್ ರವೀಂದ್ರನ್
ಬೇಪೂರ್ - ಪಿಎ ಮುಹಮ್ಮದ್ ರಿಯಾಜ್
ಕೊಡುವಳ್ಳಿ - ಕಾರಾಟ್ ರಜಾಕ್
ಪಾಲಕ್ಕಾಡ್ ಜಿಲ್ಲೆ
ಅಲತೂರ್ - ಕೆ.ಡಿ.ಪ್ರಸನ್ನನ್
ನೆಮ್ಮರಾ - ಕೆ ಬಾಬು
ಮಲಂಪುಳ - ಪ್ರಭಾಕರನ್
ಕೊಂಗಡ್- ಪಿಪಿ ಸುಮೋದ್
ತರೂರ್ - ಡಾ. ಪಿ.ಕೆ.ಜಮೀಲಾ
ಒಟ್ಟಪಾಲಂ - ಪಿ ಉಣ್ಣಿ
ಶೋರ್ನೂರ್ - ಸಿ.ಕೆ.ರಾಜೇಂದ್ರನ್
ತ್ರಿಥಾಲಾ - ಎಂಬಿ ರಾಜೇಶ್
ಕಾಸರಗೋಡು ಜಿಲ್ಲೆ
ಉದುಮ-ಸಿ.ಎಚ್. ಕುಂಞಂಬು
ತ್ರಿಕ್ಕರಿಪುರ-ರಾಜಗೋಪಾಲ್
ವಯನಾಡ್ ಜಿಲ್ಲೆ
ಮಾನಂದವಾಡಿ-ಕೇಳು