ಕಾಸರಗೋಡು: ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳ ಕ್ಯಾಂಪಸ್‍ನಲ್ಲಿ ಮಹಿಳಾ ವಿಷ್ಕøತ ಎಂಬ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿರುವುದಾಗಿ ವಿವಿ ಉಪ ಕುಲಪತಿ ಪ್ರೊ. ಎಚ್. ವಎಂಕಟೇಶ್ವರಲು ತಿಳಿಸಿದ್ದಾರೆ. ಅವರು ವಿವಿ ಪೆರಿಯ ಕ್ಯಾಂಪಸ್ನಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಸಿಬ್ಬಂದಿ ಹಾಗೂ ಶಿಕ್ಷಕಿಯರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವ ವಿದ್ಯಾಲಯದಲ್ಲಿ ಶೇ. 60ರಷ್ಟು ವಿದ್ಯಾರ್ಥಿಗಳೂ ಮಹಿಳೆಯರೇ ಆಗಿದ್ದಾರೆ. ಕ್ಯಾಂಪಸ್‍ನೊಳಗೆ ಸಂಚರಿಸುವ ಬ್ಯಾಟರಿ ಚಾಲಿತ ವಾಹನಗಳಲ್ಲಿ ಮಹಿಳಾ ಉದ್ಯೋಗಿಗಳನ್ನು ಸೇವೆಗೆ ಸೇರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಪ್ರತಿ ಇಲಾಖೆಯಲ್ಲೂ ಮಹಿಳಾ ಕೊಠಡಿಗಳನ್ನು ತೆರೆಯಲಾಗುವುದು. ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವಿ ಹೆಚ್ಚಿನಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಗಮನಹರಿಸಲಿರುವುದಾಗಿ ತಿಳಿಸಿದರು.
ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್ ನಂಬ್ಯಾರ್, ಹಣಕಾಸು ಅಧಿಕಾರಿ ಡಾ. ಬಿ.ಆರ್. ಪ್ರಸನ್ನ ಕುಮಾರ್, ಅಕಾಡಮಿಕ್ ಡೀನ್ ಡಾ. ಕೆ.ಪಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಮುಖ್ಯಸ್ಥರಾದ ಡಾ. ಜಾಸ್ಮಿನ್ ಷಾ, ಡಾ. ಜೆ. ಸಂಗೀತಾ, ಡಾ. ದೇವಿ ಕೆ, ಡಾ. ದೇವೀಪಾರ್ವತಿ, ಡಾ. ಆರತೀ ನಾಯರ್, ಡಾ. ಜಯಲಕ್ಷ್ಮೀ ರಾಜೀವ್, ಡಾ. ಸುಪ್ರಿಯಾ ಪಿ, ಅರ್ಚನಾ ಕೆ.ಪಿ, ಶ್ರೀಜಯಾ ಕೆ.ಎಂ, ಕುಸುಮಂ, ಬಿಂದುಪ್ರಮೋದ್, ಅಬೀರಾ ಸಿ.ಎ, ಚಾರುದಾ ಕೆ ಉಪಸ್ಥಿತರಿದ್ದರು.