ಕೊಚ್ಚಿ: ಚುನಾವಣಾ ಕಣವಾಗಿರುವ ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಅಭ್ಯರ್ಥಿ ಜೋಸ್ ಮಾಣಿ ಲವ್ ಜಿಹಾದ್ ಕುರಿತು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ.
ಸಾರ್ವಜನಿಕರಿಗೆ ಲವ್ ಜಿಹಾದ್ ಕುರಿತು ಆತಂಕಗಳಿದ್ದರೆ ಅದನ್ನು ಪರಿಹರಿಸಬೇಕು ಎಂದು ಸಾರ್ವಜನಿಕವಾಗಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಭಾಗವಾಗಿರುವ ಕೇರಳ ಕಾಂಗ್ರೆಸ್ (ಎಂ) ನ ಅಭ್ಯರ್ಥಿಯಾಗಿರುವ ಜೋಸ್ ಮಾಣಿ ಹೇಳಿದ್ದಾರೆ.
ಈ ಹೇಳಿಕೆಗೆ ಪೂರಕವಾಗಿ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಪರಿಷತ್ (ಕೆಸಿಬಿಸಿ) ರಾಜ್ಯದಲ್ಲಿ ಲವ್ ಜಿಹಾದ್ ಇರುವುದು ನಿಜ ಎಂದು ಹೇಳಿದೆ. ಜೋಸ್ ಮಾಣಿ ಅವರ ಹೇಳಿಕೆ ಸಿಪಿಐ ಹಾಗೂ ಸಿಪಿಐ(ಎಂ) ನ ಎಲ್ ಡಿಎಫ್ ಮಿತ್ರಪಕ್ಷಗಳಿಗೆ ಮುಜುಗರ ಉಂಟು ಮಾಡಿದೆ.