ಕೊಚ್ಚಿ: ಕಳೆದ ಕೆಲವು ದಿನಗಳಿಂದ ಕೇರಳ ರಾಜಕೀಯದಲ್ಲಿ ನೇಮಂ ವಿಧಾನ ಸಭಾ ಕ್ಷೇತ್ರ ತೀವ್ರ ಚರ್ಚೆಯ ಕೇಂದ್ರವಾಗಿದೆ. ನೇಮಂ ಕ್ಷೇತ್ರ ಈಗ ಬಿಜೆಪಿಯ ಕೈಯಲ್ಲಿರುವ ಏಕೈಕ ಕ್ಷೇತ್ರವಾಗಿದೆ. ಇದೀಗ ಕೇರಳದ ಟ್ರೆಂಡ್ ಸೆಟ್ಟರ್ ಆಗುತ್ತಿದೆ.
ಕೇರಳದಲ್ಲಿ ಬಿಜೆಪಿ ಖಾತೆ ಹೊಂದಿರುವ ಏಕೈಕ ಕ್ಷೇತ್ರ ನೇಮಂ. ತಿರುವನಂತಪುರದಲ್ಲಿ ಸಿಪಿಎಂನ್ನು ಪ್ರಬಲವಾಗಿ ಮುನ್ನಡೆಸಿದ ವಿ ಶಿವಂಕುಟ್ಟಿಯನ್ನು ಪರಾಭವಗೊಳಿಸಿ ಕಳೆದ ಬಾರಿ ಬಿಜೆಪಿ ವಿಧಾನಸಭೆಗೆ ಪಾದಾರ್ಪಣೆ ಮಾಡಿತು. ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಕ್ರಿಯ ಚರ್ಚೆಯೊಂದಿಗೆ ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಈಗಾಗಲೇ ನಿರತವಾಗಿದೆ. ಅಭ್ಯರ್ಥಿಯನ್ನು ಘೋಷಿಸುವ ಮೊದಲೇ ಅಭಿಯಾನಗಳು ಪ್ರಾರಂಭವಾಗಿವೆ. ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಪಕ್ಷ ಪರಿಗಣಿಸುತ್ತಿದೆ.
ಆದರೆ ಇದು ಚರ್ಚೆಯ ವಿಷಯವಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗಬೇಕೆಂಬುದು ಗೊಂದಲದ ವಿಷಯವಾಗಿದೆ. ಬಿಜೆಪಿಯ ಉಕ್ಕಿನ ಕೋಟೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಸವಾಲು ಹಾಕಿದ್ದು ಇದರೊಂದಿಗೆ ಹಲವು ಟ್ರೆಂಡ್ ಗಳು ಪ್ರಾರಂಭವಾಯಿತು. ಯಾವುದೇ ನಾಯಕರು ಸವಾಲನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಸವಾಲನ್ನು ಸ್ವೀಕರಿಸಲು ಕೊನೆಗೆ ಕಾಂಗ್ರೆಸ್ಸ್ ಹೈಕಮಾಂಡ್ ಮುಂದೆ ಬಂದಿದ್ದು ಉಮ್ಮನ್ ಚಾಂಡಿ ಅಥವಾ ಚೆನ್ನಿತ್ತಲ ಸ್ಪರ್ಧಿಸಬೇಕೆಂದು ಬೇಡಿಕೆ ಕೇಳಿಬಂದಿದೆ. ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ನಿರ್ಧರಿಸಿಲ್ಲ.
ರಾಜ್ಯದಲ್ಲಿ ಕೇವಲ ಒಂದು ಸ್ಥಾನವನ್ನು ಹೊಂದಿರುವ ಬಿಜೆಪಿ ಈ ಸವಾಲನ್ನು ಏಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ಸಿಗರ ಒಂದು ಭಾಗ ಕೇಳುತ್ತಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಈ ಸವಾಲನ್ನು ತೆಗೆದುಕೊಳ್ಳುವ ಶಕ್ತಿ ಕಾಂಗ್ರೆಸ್ಸಿಗೆ ಇಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ.