ನವದೆಹಲಿ: ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಐದು ಮಸೂದೆಗಳನ್ನು ಮಂಡಿಸಲಾಗಿದೆ.
ಪ್ರಶ್ನೋತ್ತರ ಅವಧಿಯ ಬಳಿಕ ಕೇಂದ್ರ ಸರ್ಕಾರ ಒಟ್ಟು ಐದು ಮಸೂದೆಗಳನ್ನು ಮಂಡಿಸಿದೆ.
1. ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶದ (ತಿದ್ದುಪಡಿ) ಮಸೂದೆ, 2021
2. ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2021
3. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಮತ್ತು ಸಂಶೋಧನೆ (ತಿದ್ದುಪಡಿ) ಮಸೂದೆ, 2021
4. ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ, 2021
5. ದಿ ಮೆರೈನ್ ಏಡ್ಸ್ ಟು ನ್ಯಾವಿಗೇಷನ್ ಮಸೂದೆ, 2021 ಅನ್ನು ಸದನದಲ್ಲಿ ಪರಿಚಯಿಸಲಾಯಿತು.
ಕಾಂಗ್ರೆಸ್ ಪರವಾಗಿ, ಶಶಿ ತರೂರ್ ಅವರು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2021 ಮತ್ತು ಜುವೆನೈಲ್ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ, 2021ರ ಮಂಡನೆಯನ್ನು ವಿರೋಧಿಸಿದರು.ತಾಂತ್ರಿಕ ಆಧಾರದ ಮೇಲೆ ಅದನ್ನು ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.