ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳ ಕೋವಿಡ್ ಸಂಹಿತೆಗಳನ್ನು ಪಾಲಿಸದೆ ವಿದ್ಯಾರ್ಥಿಗಳನ್ನು, ಪುಟ್ಟ ಮಕ್ಕಳನ್ನು ಸಾಮೂಹಿಕವಾಗಿ ಕುಳ್ಳಿರಿಸಿ ತರಗತಿ ನಡೆಸಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಸದ್ರಿ ಆನ್ ಲೈನ್ ರೂಪದಲ್ಲಿ ಮಾತ್ರ ಪುಟ್ಟ ಮಕ್ಕಳ ತರಗತಿ ನಡೆಸಲು ಅನುಮತಿಯಿದೆ. ಅದಕ್ಕೆ ವಿರುದ್ಧವಾಗಿ ನಡೆಸುವ ತರಗತಿಗಳನ್ನು ತಕ್ಷಣ ನಿಲುಗಡೆ ಮಾಡುವ ಕ್ರಮ ಕೈಗೊಳ್ಳಬೇಕು ಎಂದವರು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ತಿಳಿಸಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಮುಂಬರುವ ಪರೀಕ್ಷೆಗಳ ಪೂರ್ವಭಾವಿಯಾಗಿ ಶಾಲಾ ಮಕ್ಕಳನ್ನು ತರಗತಿ ಮಟ್ಟದಲ್ಲಿ ಪ್ರತ್ಯೇಕಿಸಿ ಆರ್.ಟಿ.ಪಿ.ಸಿ.ಆರ್. ತಪಾಸಣೆ ಪೂರ್ಣಗೊಳಿಸಿ ಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.