ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶಾಭಿಷೇಕ ಸಮಿತಿಯ ಮಹಾಸಭೆಯು ಶ್ರೀ ಕ್ಷೇತ್ರದಲ್ಲಿ ಭಾನುವಾರ ರಘುನಾಥ ಪೈಯವರ ಅಧ್ಯಕ್ಷತೆಯಲ್ಲಿ ಜರಗಿತು.
ಜೀರ್ಣೋದ್ದಾರ ಕಾರ್ಯದ ಸದ್ಯದ ಬೆಳವಣಿಗೆಯನ್ನು ಹಾಗೂ ವಿವಿಧ ಘಟ್ಟಗಳ ಹಾದುಹೋಗುವಿಕೆಯನ್ನು ವಿವೇಕಾನಂದ ಭಕ್ತ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮಾರ್ಚ್ 20ರಂದು ಭಜನೆ ಸಂಕೀರ್ತನೆ ನಡೆಯುವುದೆಂದೂ ಮರುದಿನ ಬೆಳಗ್ಗಿನ ಶುಭಮುಹೂರ್ತದಲ್ಲಿ ನೂತನ ರಾಜಗೋಪುರ ನಿರ್ಮಾಣದ ಮೊದಲ ಹಂತವಾದ ಪ್ರಸ್ತುತ ಗೋಪುರವನ್ನು ಬಿಚ್ಚುವುದೆಂದೂ ತಿಳಿಸಿದರು.
ಸಮಿತಿಯ ಗೌರವ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅವರು ತಮ್ಮ ನುಡಿಗಳಲ್ಲಿ ಕೃಷ್ಣನ ಮೇಲಿನ ಅಚಲ ಭಕ್ತಿ ಮತ್ತು ನಿರಂತರ ಪ್ರಯತ್ನಗಳ ಮೂಲಕ ಉದ್ದೇಶಿತ ಕಾರ್ಯವು ಖಂಡಿತ ಸಾಕಾರಗಳ್ಳುವುದೆಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಜಯಕುಮಾರ್ ವರದಿ ಮತ್ತು ಉದನೇಶ್ವರ ಭಟ್ ಲೆಕ್ಕ ಪತ್ರಗಳನ್ನು ಮಂಡಿಸಿದರು. ದಾಮೋದರ ಸ್ವಾಗತಿಸಿ, ಪುಂಡರೀಕಾಕ್ಷ ಕೆ.ಎಲ್. ವಂದಿಸಿದರು. ಸಂದ್ಯಾ ಕೇಶವ ಅಡಿಗ ಅವರು ಪ್ರಾರ್ಥನೆ ಗೀತೆ ಹಾಡಿದರು. ದಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನೂತನ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಯೋಗೀಶ್ ಕಡಮಣ್ಣಾಯ, ಕುಂಬ್ಳೆ ವಿಶ್ವನಾಥ ನಾಯಕ್, ಕೃಷ್ಣರಾಜವರ್ಮ, ಸದಾನಂದ ಕಾಮತ್, ಮಂಜುನಾಥ ಆಳ್ವ, ಸುಕುಮಾರ ಮತ್ತಿತರರು ಉಪಸ್ಥಿತರಿದ್ದರು.