ನವದೆಹಲಿ: ಕೆಲವು ಓವರ್ ದಿ ಟಾಪ್(ಒಟಿಟಿ) ಪ್ಲಾಟ್‌ಫಾರ್ಮ್‌ಗಳು ಕೆಲವು ರೀತಿಯ ಅಶ್ಲೀಲ ವಿಷಯಗಳನ್ನು ತೋರಿಸುತ್ತವೆ. ಅಂತಹ ಕಾರ್ಯಕ್ರಮಗಳನ್ನು ಪ್ರದರ್ಶಿಸಲು ಸ್ಕ್ರೀನಿಂಗ್ ವ್ಯವಸ್ಥೆ ಇರಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಮೆಜಾನ್ ಪ್ರೈಮ್ ವಿಡಿಯೋ ಭಾರತದ ಮುಖ್ಯಸ್ಥ ಅಪರ್ಣಾ ಪುರೋಹಿತ್ ಮನವಿ ಆಲಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಂತ್ರಿಸುವ ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳನ್ನು ಕೋರ್ಟ್ ಮುಂದೆ ಇಡುವಂತೆ ಕೇಳಿದೆ. ವೆಬ್ ಸರಣಿ 'ತಾಂಡವ್' ಮೂಲಕ ಆಕೆಯ ವಿರುದ್ಧ ದಾಖಲಾದ ಎಫ್‌ಐಆರ್ಗಳಿಗೆ ಸಂಬಂಧಿಸಿದಂತೆ ಆಕೆಯ ನಿರೀಕ್ಷಿನ ಜಾಮೀನು ನಿರಾಕರಿಸಿದೆ.
"ಕೆಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ವಸ್ತುಗಳನ್ನು ತೋರಿಸುತ್ತಿರುವುದರಿಂದ ಸಮತೋಲನವನ್ನು ಸಾಧಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಆರ್ ಎಸ್ ರೆಡ್ಡಿ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.
ಪುರೋಹಿತ್ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಅಪರ್ಣಾ ಪುರೋಹಿತ್ ಅಮೆಜಾನ್ ನ ಉದ್ಯೋಗಿಯಷ್ಟೇ, ಅವರು ನಿರ್ಮಾಪಕ ಅಥವಾ ತಾರಾಬಳಗದಲ್ಲಿಲಲ್ಲ ಎಂದು ಹೇಳುವ ಮೂಲಕ ತನ್ನ ವಿರುದ್ಧದ ಪ್ರಕರಣವನ್ನು "ಆಘಾತಕಾರಿ" ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ ಮತ್ತು ಮೊಹಮ್ಮದ್ ಝಿಶನ್ ಅಯೂಬ್ ಅಭಿನಯದ ಒಂಬತ್ತು ಸಂಚಿಕೆಗಳ ರಾಜಕೀಯ ಥ್ರಿಲ್ಲರ್ ತಾಂಡವ್ ಇತ್ತೀಚೆಗೆ ಸ್ಟ್ರೀಮಿಂಗ್ ಪ್ರಾರಂಭಿಸಿ ವಿವಾದಕ್ಕೆ ಗುರಿಯಾಗಿತ್ತು.