ಕೊಚ್ಚಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿದರು. ಮಲಬಾರ್ ಗಲಭೆಯ ಕಾಲಘಟ್ಟದ ಘೋಷಣೆಗಳನ್ನು ಸರ್ಕಾರ ಮತ್ತು ಸ್ವತಃ ಮುಖ್ಯಮಂತ್ರಿ ಮತ್ತೆ ಆವರ್ತಿಸುತ್ತಿರುವುದು ಅಸಂವಿಧಾನಿಕ. ಇದು ದೇವರ ಸ್ವಂತ ನಾಡು ಹೌದೇ ಎಂದು ನಿರ್ಮಲಾ ಸೀತಾರಾಮನ್ ಮುಖ್ಯಮಂತ್ರಿಯÀ್ನು ಕೇಳಿದರು.
ಕೇರಳ ಇನ್ನು ಮುಂದೆ ದೇವರ ಸ್ವಂತ ನಾಡಲ್ಲ. ಕೊಲೆ, ದಾಳಿಗಳು ಇಲ್ಲಿ ನಿತ್ಯ ಘಟನೆಯಾಗಿದೆ. ಪಿಣರಾಯಿ ವಿಜಯನ್ ಅವರು ತಮ್ಮ ಹೆಚ್ಚಿನ ಸಮಯವನ್ನು ಪಕ್ಷದ ಪ್ರಚಾರಾರ್ಥವಾದ ಕೆಲಸದಲ್ಲಿ ಕಳೆಯುತ್ತಾರೆ ಮತ್ತು ದೇಶದ ಕೊರೋನಾ ಪ್ರಕರಣಗಳಲ್ಲಿ ಮೂರನೇ ಒಂದು ಭಾಗ ಕೇರಳದಲ್ಲಿದೆ ಎಂದು ಬೊಟ್ಟುಮಾಡಿದರು.
ಎಸ್.ಡಿ.ಪಿ.ಐ ಜೊತೆ ಸರ್ಕಾರಕ್ಕೆ ನೇರ ಮೈತ್ರಿ ಇಲ್ಲ. ಆದರೆ ಪರೋಕ್ಷವಾಗಿ ಬಲವಾದ ಮೈತ್ರಿ ಇದೆ. ಇದು ಪಂದಲಂ ಪುರಸಭೆಯಲ್ಲಿ ನಡೆದಂತೆ ಕೇರಳದಾದ್ಯಂತ ನಡೆಯಲಿದೆ. ಚಿನ್ನ ಕಳ್ಳಸಾಗಾಣಿಕೆದಾರರಿಗೆ ಮುಖ್ಯಮಂತ್ರಿ ಕಚೇರಿಯೊಂದಿಗೆ ನೇರ ಸಂಪರ್ಕವಿದೆ ಎಂದ ನಿರ್ಮಲಾ ಸೀತಾರಾಮನ್, ಇತ್ತೀಚೆಗೆ ಕೇರಳ ಸಂದರ್ಶಿಸಿದ್ದ ರಾಹುಲ್ ಗಾಂಧಿ ಚಿನ್ನ ಕಳ್ಳಸಾಗಣೆ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಕೇಳಿದರು.