ಕೋಝಿಕ್ಕೋಡ್: ಕೋಝಿಕ್ಕೋಡ್ ಉತ್ತರ ವಿಧಾನ ಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಟಿ. ರಮೇಶ್ ಪರವಾಗಿ ಮಂಗಳೂರು ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಕೇರಳದ ಭಾಷಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೊಂಕಣಿ ಮತ್ತು ಕನ್ನಡ ಮಾತನಾಡುವ ಕುಟುಂಬಗಳೊಂದಿಗೆ ಭಾನುವಾರ ಮನೆ ಸಂಪರ್ಕ ಅಭಿಯಾನದ ಮೂಲಕ ಪ್ರಚಾರ ಕಾರ್ಯ ಕೈಗೊಂಡರು.
ಕಾರ್ಪೋರೇಶನ್ ಕೌನ್ಸಿಲರ್ ಎನ್.ಶಿವಪ್ರಸಾದ್ ಮತ್ತು ಬಿಜೆಪಿ ಕ್ಷೇತ್ರ ಸಮಿತಿ ಸದಸ್ಯ ಶೈಬು ತೊಪ್ಪಾಯಿಲ್ ಉಪಸ್ಥಿತರಿದ್ದರು. ಗೌಡ ಸಾರಸ್ವತ ಬ್ರಾಹ್ಮಣ ಸಭಾ ಯುವ ವಿಭಾಗದ ನಾಯಕ ಅರುಣ್ ನಾಯಕ್ ಶಾಸಕರನ್ನು ಸ್ವಾಗತಿಸಿದರು.