ಪತ್ತನಂತಿಟ್ಟು: ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಈ ಬಾರಿ ಧಾರ್ಮಿಕ ಅಲ್ಪಸಂಖ್ಯಾತರು ಬಿಜೆಪಿ ಬಗ್ಗೆ ಪ್ರತಿಕೂಲ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಆದಾಗ್ಯೂ, ಕೆಲವು ಕೇಂದ್ರಗಳು ಮುಸ್ಲಿಂ ಮತವನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿವೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.
ಮಂಜೇಶ್ವರ ಮತ್ತು ಕೋನ್ನಿ ಎರಡೂ ಕಡೆಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸವಿದೆ. ಈ ಕ್ಷೇತ್ರಗಳು ಪರಿಚಿತವಾಗಿರುವ ಕಾರಣ ಅಭಿಯಾನವು ಅಡೆತಡೆಯಿಲ್ಲದೆ ಸಾಗಿದೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಯಾವ ಕ್ಷೇತ್ರವನ್ನು ಆಯ್ಕೆಮಾಡುವೆ ಎಂಬ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಕೆ.ಸುರೇಂದ್ರನ್ ಹೇಳಿದರು.
ಗುರುವಾಯೂರ್ ನಲ್ಲಿ ಎನ್‍ಡಿಎ ತನ್ನ ಬೆಂಬಲವನ್ನು ಡೆಮಾಕ್ರಟಿಕ್ ಸೋಶ್ಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿ ದಿಲೀಪ್ ನಾಯರ್ ಅವರಿಗೆ ನೀಡಲಿದೆ. ತಲಶೇರಿಯ ಬಗ್ಗೆ ಇನ್ನಷ್ಟೇ ನಿರ್ಧರಿಸಲಾಗುವುದು ಎಂದು ಸುರೇಂದ್ರನ್ ಸ್ಪಷ್ಟಪಡಿಸಿದರು.
ನಾಮಪತ್ರಗಳನ್ನು ತಿರಸ್ಕರಿಸಿದ ಕಾರಣ ಯಾವುದೇ ಅಭ್ಯರ್ಥಿ ಇಲ್ಲದ ಗುರುವಾಯೂರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಲು ಬಿಜೆಪಿ ನಿರ್ಧರಿಸಿದೆ. ಇದೇ ವೇಳೆ ಡೆಮಾಕ್ರಟಿಕ್ ಸೋಶ್ಯಲ್ ಜಸ್ಟೀಸ್ ಪಕ್ಷವು ಚುನಾವಣೆಯ ಬಳಿಕ ಎನ್‍ಡಿಎಯ ಮಿತ್ರಪಕ್ಷವಾಗುವ ಬಗ್ಗೆ ಈಗಾಗಲೇ ತಿಳಿಸಿದೆ ಎಂದು ಸುರೇಂದ್ರನ್ ಮಾಹಿತಿ ನೀಡಿದರು.