ಕಾಸರಗೋಡು: ರಾಜ್ಯದ ಜಾತ್ಯತೀತ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಐಕ್ಯರಂಗದ ಗೆಲುವು ಅನಿವಾರ್ಯ ಎಂಬುದಾಗಿ ಕೆಪಿಸಿಸಿ ಉಪಾಧ್ಯಕ್ಷ ವಕೀಲ ಸಿ.ಕೆ ಶ್ರೀಧರನ್ ತಿಳಿಸಿದ್ದಾರೆ.
ಅವರು ಡಿಸಿಸಿ ಕಚೇರಿಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿ ರಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಎ.ಎಂ ಕಡವತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಟಿ ಅಹಮ್ಮದಾಲಿ, ಕನ್ವೀನರ್ ಗೋವಿಂದನ್ ನಾಯರ್, ಕೆ.ಪಿ ಕುಞÂಕಣ್ಣನ್, ಹಾಕಿಂ ಕುನ್ನಿಲ್, ಟಿ.ಇ ಅಬ್ದುಲ್ಲ, ಎ.ಅಬ್ದುಲ್‍ರಹಮಾನ್, ಪಿ.ಎ ಅಶ್ರಫಲಿ, ಹರೀಶ್ ಬಿ.ನಂಬ್ಯಾರ್, ಕರಿವೆಳ್ಳೂರು ವಿಜಯನ್, ಮುನೀರ್ ಮುನಾಂಬಾ, ನ್ಯಾಶನಲ್ ಅಬ್ದುಲ್ಲ, ವಕೀಲ ಯು.ಎ ಬಾಲನ್, ಮಾಹಿನ್ ಕೇಳೋಟ್ ಮುಂತಾದವರು ಉಪಸ್ಥಿತರಿದ್ದರು. ವಕೀಲ ಎ.ಗೋವಿಂದನ್ ನಾಯರ್ ಸ್ವಾಗತಿಸಿದರು.
ವಕೀಲ ಎ.ಗೋವಿಂದನ್ ನಾಯರ್ ಅವರನ್ನು ಅಧ್ಯಕ್ಷ, ಎ.ಎಂ ಕಡವತ್ ಅವರನ್ನು ಜನರಲ್ ಕನ್ವೀನರ್, ಅಬ್ದುಲ್ಲಕುಞÂ ಚೆರ್ಕಳ ವರ್ಕಿಂಗ್ ಕನ್ವೀನರ್ ಹಾಗೂ ಮಾಹಿನ್ ಕೇಲೋಟ್ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.