HEALTH TIPS

ಮೋದಿ ಸರ್ಕಾರ ಕೊನೆಯಾಗುವವವರೆಗೂ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ರೈತರು ಸಿದ್ಧರಾಗಿದ್ದಾರೆ: ನರೇಂದ್ರ ಟಿಕಾಯತ್

           ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಬಾಕಿ ಉಳಿದಿರುವ ಮೂರೂವರೆ ವರ್ಷದ ಅಂತಿಮ ದಿನದವರೆಗೂ ದೆಹಲಿ ಗಡಿಗಳಲ್ಲಿ ರೈತರು ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ ಎಂದು ರೈತ ಮುಖಂಡ ಹಾಗೂ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಪುತ್ರ ನರೇಂದ್ರ ಟಿಕಾಯತ್ ಹೇಳಿದ್ದಾರೆ.


       ಮುಜಫರ್ ನಗರ ಜಿಲ್ಲೆಯ ಸಿಸೌಲಿಯಲ್ಲಿರುವ ತಮ್ಮ ಮನೆಯಲ್ಲಿ ಪಿಟಿಐ ಜೊತೆ ಮಾತನಾಡಿದ 45 ವರ್ಷದ ನರೇಂದ್ರ ಟಿಕಾಯತ್ ಅವರು, 'ಈ ಹಿಂದೆ ವಿವಿಧ ತಂತ್ರಗಳನ್ನು ಬಳಸಿ ಇತರೆ ಆಂದೋಲನಗಳನ್ನು ಶಮನೊಳಿಸಿದ ರೀತಿಯಲ್ಲೇ ರೈತರ ಪ್ರತಿಭಟನೆಯನ್ನು ಕೂಡ ಹಿಮ್ಮಟಿ,ಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಕೇಂದ್ರ ಸರ್ಕಾರವಿದೆ. ಆದರೆ ನಾನು ಈ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿಸುತ್ತೇನೆ... ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಕೈ ಬಿಡದೇ ಇದ್ದರೆ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಬಾಕಿ ಉಳಿದಿರುವ ಮೂರೂವರೆ ವರ್ಷದ ಅಂತಿಮ ದಿನದವರೆಗೂ ದೆಹಲಿ ಗಡಿಗಳಲ್ಲಿ ರೈತರು ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕಾಗಿ ರೈತರು ಮಾನಸಿಕವಾಗಿ ಸಿದ್ಧವಾಗಿದ್ದಾರೆ ಎಂದು ಹೇಳಿದರು.

       ಇದೇ ವೇಳೆ ತಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಕುರಿತು ಮಾತನಾಡಿದ ನರೇಂದ್ರ ಟಿಕಾಯತ್ ಅವರು, ನಮ್ಮದು ರೈತ ಪರ ಹೋರಾಟದ ಕುಟುಂಬ.. ನಮ್ಮ ತಂದೆ.. ನಮ್ಮ ಸಹೋದರರೆಲ್ಲರೂ ರೈತರಿಗಾಗಿಯೇ ಹೋರಾಟ ಮಾಡಿದ್ದೇವೆ. ಆದರೆ ಎಂದಿಗೂ ನಾವು ಈ ಹೋರಾಟವನ್ನು ನಮ್ಮ ಲಾಭಕ್ಕೆ ಬಳಸಿಕೊಂಡಿಲ್ಲ. ಇಂದು ದೇಶದಲ್ಲಿ ರೈತರು ಕಂಡುಕೇಳರಿಯದ ರೀತಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ತನ್ನ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಈ ಪೈಕಿ ನಮ್ಮ ಕುಟುಂಬದ ಮೇಲಿನ ಆರೋಪಗಳೂ ಕೂಡ ಒಂದಾಗಿದೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಗೂಂಡಾಗಿರಿ ಮಾಡುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನವಿದು. ನಮ್ಮ ಇಬ್ಬರು ಸಹೋದರರು ಮತ್ತು ಇಡೀ ಟಿಕಾಯತ್ ಕುಟುಂಬದ ಒಬ್ಬೇ ಒಬ್ಬ ಸದಸ್ಯರ ವಿರುದ್ಧವೂ ಯಾವುದೇ ಸಣ್ಣಪುಟ್ಟ ತಪ್ಪುಗಳನ್ನು ಸಾಬೀತುಪಡಿಸಿದರೂ ನಾವು ಪ್ರತಿಭಟನೆಯನ್ನು ಕೈ ಬಿಡುತ್ತೇವೆ. ದೆಹಲಿ ಬಿಟ್ಟು ನಮ್ಮ ಮನೆಗೆ ವಾಪಸ್ ಆಗುತ್ತೇವೆ ಎಂದು ನರೇಂದ್ರ ಟಿಕಾಯತ್ ಸವಾಲು ಹಾಕಿದ್ದಾರೆ.

ಅಂತೆಯೇ ನಾವು ಹೋರಾಟಗಳಿಂದಲೇ ಆಸ್ತಿ ಮಾಡಿಕೊಂಡಿದ್ದೇವೆ ಎಂಬುದು ಶುದ್ಧಸುಳ್ಳು...ನಾನು ಸಿಸೌಲಿಯಲ್ಲಿ ಮನೆಯಲ್ಲೇ ಇದ್ದರೂ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಮೇಲೆ ನಾನು ಒಂದು ಕಣ್ಣಿಟ್ಟಿರುತ್ತೇನೆ. ಈ ಪ್ರತಿಭಟನೆಯನ್ನು ಯಾವುದೇ ವಿಧಾನದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಬೇಡಿಕೆಗಳು ಈಡೇರದಷ್ಟು ಕಾಲ ಇದು ಮುಂದುವರಿಯುತ್ತದೆ. ಈ ಸರ್ಕಾರವು ಮೂರೂವರೆ ವರ್ಷಗಳ ಅಧಿಕಾರಾವಧಿಯನ್ನು ಹೊಂದಿದೆ, ನಾವು ಅದರ ಅವಧಿ ಮುಗಿಯುವವರೆಗೂ ಚಳುವಳಿಯನ್ನು ಮುಂದುವರಿಸಬಹುದು. ಇದು ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲಿದೆ. ರೈತರ ಎಲ್ಲ ಬೇಡಿಕೆಗಳೂ ಈಡೇರಬೇಕು. ಭವಿಷ್ಯದ ಯಾವುದೇ ಭರವಸೆಗಳಿಂದ ರೈತರು ಪ್ರತಿಭಟನೆ ಹಿಂಪಡೆಯುವುದಿಲ್ಲ. ವಿವಾದಿತ ಎಲ್ಲ ಕೃಷಿ ಕಾನೂನುಗಳನ್ನೂ ಸರ್ಕಾರ ಹಿಂಪಡೆಯಬೇಕು. ಆಗ ಮಾತ್ರ ನಾವು ಪ್ರತಿಭಟನೆ ಹಿಂಪಡೆಯುತ್ತೇವೆ.

ಗೂಂಡಾಗಿರಿಯ ಅವಶ್ಯಕತೆ ನಮಗಿಲ್ಲ 
            ಇದೇ ವೇಳೆ ಬಿಕೆಯು ಗೂಂಡಾಗಿರಿ ಮಾಡುತ್ತಿದೆ ಎಂಬ ಆರೋಪ ತಳ್ಳಿ ಹಾಕಿದ ನರೇಂದ್ರ ಟಿಕಾಯತ್ ಅವರು, ಗೂಂಡಾಗಿರಿಯನ್ನು ನಾವೇಕೆ ಮಾಡಬೇಕು. ಪ್ರತಿಭಟನೆಗೆ ನಾವು ಹಣವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ ನಮ್ಮ 200 ಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಸತ್ತವರ ಕೊನೆಯ ವಿಧಿಗಳಲ್ಲಿಯೂ ಜನರು ಹಣವನ್ನು ದಾನ ಮಾಡುತ್ತಿದ್ದಾರೆ ಎಂದು ಹೇಳಿದರು. ಪ್ರತಿಭಟನೆ ಮೂಲಕ ಹಣ ಸಾಂಪಾದಿಸುವ ಅವಶ್ಯಕತೆ ನಮಗಿಲ್ಲ. ನಮ್ಮ ಕುಟುಂಬದ ಅಧೀನದಲ್ಲಿ 84 ಗ್ರಾಮಗಳಿಗೆವೆ. ನಮ್ಮ ತಂದೆ 84 ಗ್ರಾಮಗಳ ಮುಖ್ಯಸ್ಛರಾಗಿದ್ದರು. ಅವರ ಸಾವಿನ ಬಳಿಕ ಈ 84 ಗ್ರಾಮಗಳ ಜವಾಬ್ದಾರಿ ಅವರ ಪುತ್ರರಾದ ನಮ್ಮ ಮೇಲಿದೆ. ನಮ್ಮ ಕುಟುಂಬದ ಒಡೆತನದಲ್ಲೇ ಸಾಕಷ್ಟು ಎಕರೆ ಕೃಷಿ ಭೂಮಿ ಇದೆ. ಅದರಿಂದಲೇ ಸಾಕಷ್ಟು ಸಂಪಾದನೆ ಇದೆ ಎಂದು ಹೇಳಿದ್ದಾರೆ.

ಲಿಖಿತವಾಗಿ ಏಕೆ ನೀಡಲು ಸಾಧ್ಯವಿಲ್ಲ? 
       ಇದೇ ವೇಳೆ ಬೆಂಬಲ ಬೆಲೆ (ಎಂಎಸ್ ಪಿ) ಮೂಲಕವೇ ಬೆಳೆಗಳನ್ನು ಖರೀದಿಸಲಾಗುವುದು ಎಂದು ಸರ್ಕಾರ ಮತ್ತೆ ಮತ್ತೆ ಹೇಳುತ್ತಿದೆ. ಅದರೆ ಇದನ್ನು ಲಿಖಿತವಾಗಿ ಏಕೆ ನೀಡಲು ಸಾಧ್ಯವಿಲ್ಲ? ಎಲ್ಪಿಜಿ ಸಿಲಿಂಡರ್ಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಅವರು ಮಾತನಾಡುತ್ತಲೇ ಸಬ್ಸಿಡಿ ಕಡಿತ ಮಾಡಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries