ತಿರುವನಂತಪುರ: ಮಲಯಾಳಂ ನಟಿ ಮಂಜು ವಾರಿಯರ್ ಬಾಲಿವುಡ್ ಗೆ ಸೇರ್ಪಡೆಗೊಂಡಿದ್ದಾರೆ. ಚಿತ್ರದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬರಲಿದೆ, ಮತ್ತು ಈ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ಮಾಧವನ್ ಅವರದ್ದಾಗಿದ್ದು, ದಕ್ಷಿಣ ಭಾರತದ ತಾರೆ ಮಂಜು ವಾರಿಯರ್ ಚಿತ್ರದ ನಾಯಕಿಯಾಗಿದ್ದಾರೆ.
ಬೋಪಾಲದಲ್ಲಿ ಇತ್ತೀಚೆಗೆ ನಡೆದ ಚಿತ್ರದ ಕಾರ್ಯಾಗಾರದಲ್ಲಿ ಮಂಜು ವಾರಿಯರ್ ಅವರು ಭಾಗವಹಿಸಿದ್ದರು. ಸೂಪರ್ ಸ್ಟಾರ್ ಮಮ್ಮುಟ್ಟಿಯವರೊಂದಿಗೆ ಅಭಿನಯಿಸಿರುವ ಮಂಜುವಾರಿಯರ್ ಅವರ ದಿ ಪ್ರೀಸ್ಟ್ ಚಿತ್ರ ನಾಳೆ ಬಿಡುಗಡೆಯಾಗಲಿದೆ. ಈ ಬಗ್ಗೆ ಅವರು ನಿನ್ನೆ ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಮಂಜು ವಾರಿಯರ್ ಅವರು ಪ್ರೀಸ್ಟ್ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ನಂತರ ತ್ರಿಶೂರ್ ಗೆ ತೆರಳಿ ತನ್ನ ತಾಯಿ ಗಿರಿಜಾ ಮಾಧವನ್ ಅವರ ಕಥಕಳಿ ಪ್ರದರ್ಶನ ವೀಕ್ಷಿಸಲು ತೆರಳಿದರು.